ಪ್ರಧಾನಿ ಮೋದಿಗೆ ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿ| ಪ್ರಧಾನಿ ಮೋದಿಗೆ ಜಾಯೆದ್ ಮೆಡಲ್ ಘೋಷಿಸಿದ ಯುಎಇ| ಭಾರತ-ಯುಎಇ ಸಂಬಂಧ ವೃದ್ಧಿಯಲ್ಲಿ ಮೋದಿ ಮಹತ್ವದ ಪಾತ್ರ| ಜಾಯೆದ್ ಮೆಡಲ್ ಪಡೆದ ಇತರ ಗಣ್ಯರ ಪಟ್ಟಿ|
ನವದೆಹಲಿ(ಏ.04): ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಯುಕ್ತ ಅರಬ್ ರಾಷ್ಟ್ರ(ಯುಎಇ)ದ ಅತ್ಯುನ್ನತ ನಾಗರಿಕ ಪ್ರಶಸ್ತಿ ಜಾಯೆದ್ ಮೆಡಲ್ ಘೋಷಿಸಲಾಗಿದೆ.
ಯುಎಇಯೊಂದಿಗಿನ ಭಾರತ ಸಂಬಂದ ಗಟ್ಟಿಗೊಳಿಸುವಲ್ಲಿ ಪ್ರಧಾನಿ ಮೋದಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿದ್ದು, ಈ ಕಾರಣಕ್ಕೆ ಮೋದಿ ಅವರಿಗೆ ಜಾಯೆದ್ ಮೆಡಲ್ ಘೋಷಿಸಲಾಗಿದೆ ಎಂದು ಯುಎಇ ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಅಬುದಾಬಿ ಯುವರಾಜ ಮೊಹ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, 'ನಾವು ಭಾರತದೊಂದಿಗೆ ಗರಿಷ್ಠ ಸಂಬಂಧ ಹೊಂದಲು ಕಾರಣೀಭೂತರಾದ ಭಾರರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಾಯೆದ್ ಮೆಡಲ್ ಘೋಷಿಸಿರುವುದು ತುಂಬ ಸಂತಸ ತಂದಿದೆ..'ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಜಾಯೆದ್ ಮೆಡಲ್ ಪಡೆದ ಇತರ ಗಣ್ಯರು:
ವ್ಲಾದಿಮರ್ ಪುಟಿನ್-ರಷ್ಯಾ ಅಧ್ಯಕ್ಷ
ಜಾರ್ಜ್ ಡಬ್ಲೂ ಬುಷ್-ಅಮೆರಿಕ ಅಧ್ಯಕ್ಷ(ಮಾಜಿ)
ನಿಕೋಲಸ್ ಸರ್ಕೋಜಿ-ಫ್ರಾನ್ಸ್ ಅಧ್ಯಕ್ಷ(ಮಾಜಿ)
ಏಂಜಲಾ ಮಾರ್ಕೆಲ್-ಜರ್ಮನಿ ಚಾನ್ಸಲರ್
ಕ್ವಿನ್ ಎಲಿಜಬೆತ್2- ಇಂಗ್ಲೆಂಡ್
ಕ್ಸಿ ಜಿನ್ ಪಿಂಗ್-ಚೀನಾ ಅಧ್ಯಕ್ಷ
