ನವದೆಹಲಿ(ಜು.16): ಸಂಸತ್ತಿನ ಕಾರ್ಯ ಕಲಾಪಕ್ಕೆ ನಿರಂತರ ಗೈರು ಹಾಜರಾಗುತ್ತಿರುವ ಸಚಿವರ ಮೇಲೆ ಪ್ರಧಾನಿ ನರೇಂದ್ರ ಮೋದಿ ಸಿಟ್ಟಾಗಿದ್ದಾರೆ. ಸಂಸತ್ತಿನ ಕರ್ತವ್ಯದಲ್ಲಿ ನಿರ್ಲ್ಯಕ್ಷ ತೋರುತ್ತಿರುವ ಸಚಿವರಿಗೆ ಪರೋಕ್ಷ ಎಚ್ಚರಿಕೆಯನ್ನೂ ಪ್ರಧಾನಿ ಮೋದಿ ನೀಡಿದ್ದಾರೆ.

ಸಂಸತ್ತಿಗೆ ಗೈರು ಹಾಜರಾಗುವ ಸಚಿವರ ಕುರಿತು ತಮಗೆ ಮಾಹಿತಿ ಕೊಡಿ ಎಂದು ಪ್ರಧಾನಿ ಮೋದಿ ಕಟ್ಟಪ್ಪಣೆ ಹೊರಡಿಸಿದ್ದಾರೆ. ನಿತ್ಯ ಸಂಜೆ ತಮಗೆ ಹಾಜರಾತಿ ಪುಸ್ತಕದ ಮಾಹಿತಿ ನೀಡುವಂತೆ ಮೋದಿ ಆದೇಶಿಸಿದ್ದಾರೆ.

ಈ ಕುರಿತು ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಸ್ಪಷ್ಟ ಸೂಚನೆ ನೀಡಿರುವ ಮೋದಿ, ಗೈರು ಹಾಜರಾಗುವ ಸಚಿವರ ಕುರಿತು ತಮಗೆ ನಿತ್ಯವೂ ಮಾಹಿತಿ ನೀಡಬೇಕೆಂದು ಸೂಚಿಸಿದ್ದಾರೆ.