ಮುಸ್ಲಿಮರಲ್ಲೂ ಹಿಂದುಳಿದ ವರ್ಗಗಳಿವೆ, ಅವರು ಅತೀ ಹೆಚ್ಚು ಹಿಂದುಳಿದವರಾಗಿದ್ದಾರೆ. ಅಭಿವೃದ್ಧಿಯ ಫಲವನ್ನು ಅವರ ಬಳಿ ಕೊಂಡೊಯ್ಯುವುದು ಬಿಜೆಪಿಯ ಹೊಣೆಗಾರಿಕೆಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಭುವನೇಶ್ವರ (ಏ. 16): ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಿಂದುಳಿದ ಮುಸ್ಲಿಮರಿಗಾಗಿ ಕೆಲಸ ಮಾಡುವಂತೆ ಬಿಜೆಪಿ ನಾಯಕರಿಗೆ ಕರೆ ನೀಡಿದ್ದಾರೆ.

ಭುವನೇಶ್ವರದಲ್ಲಿ ನಿನ್ನೆ ಆರಂಭವಾದ ಕಾರ್ಯಕಾರಿಣಿಯಲ್ಲಿ ಬಿಜೆಪಿ ಮುಖ್ಯಮಂತ್ರಿಗಳು, 45 ಮಂದಿ ಕೇಂದ್ರ ಸಚಿವರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಪಕ್ಷದ ನಾಯಕರು ಭಾಗಿಯಾಗಿದ್ದಾರೆ.

ಮುಸ್ಲಿಮರಲ್ಲೂ ಹಿಂದುಳಿದ ವರ್ಗಗಳಿವೆ, ಅವರು ಅತೀ ಹೆಚ್ಚು ಹಿಂದುಳಿದವರಾಗಿದ್ದಾರೆ. ಅಭಿವೃದ್ಧಿಯ ಫಲವನ್ನು ಅವರ ಬಳಿ ಕೊಂಡೊಯ್ಯುವುದು ಬಿಜೆಪಿಯ ಹೊಣೆಗಾರಿಕೆಯಾಗಿದೆ ಎಂದು ಮೋದಿ ಹೇಳಿದ್ದಾರೆ.

ತ್ರಿವಳಿ ತಲಾಖ್ ಪದ್ದತಿಯಿಂದ ಮುಸ್ಲಿಮ್ ಮಹಿಳೆಯರು ಕಷ್ಟವನ್ನನುಭವಿಸುತ್ತಿದ್ದಾರೆ, ನಾವು ಅದಕ್ಕೂ ಪರಿಹಾರ ಕಂಡುಕೊಳ್ಳವ ಆಗತ್ಯವಿದೆಯೆಂದು ಪ್ರಧಾನಿ ಮೋದಿ ಈ ಸಂದರ್ಭ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಇವಿಎಂ ಬಳಕೆಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಪ್ರಧಾನಿ ಮೋದಿ ಟೀಕಿಸಿದ್ದಾರೆ.