ಕೈಗಾರಿಕೋದ್ಯಮ, ತಾಂತ್ರಿಕತೆ, ವೈಜ್ಞಾನಿಕ, ರಾಜಕೀಯ, ಕಲೆಯ ವಿಭಾಗದಲ್ಲಿನ ವಿಶ್ವದ ಪ್ರಭಾವಿ ನಾಯಕರ ಪಟ್ಟಿಯನ್ನು ಟೈಮ್ ನಿಯತಕಾಲಿಕೆ ಮುಂದಿನ ತಿಂಗಳು ಘೋಷಣೆ ಮಾಡಲಿದೆ.

ನ್ಯೂಯಾರ್ಕ್(ಮಾ.26): ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಟೈಮ್ಸ್ ಮ್ಯಾಗಜಿನ್ ಪ್ರಕಟಿಸುವ ವಿಶ್ವದ 100 ಪ್ರಭಾವಿ ನಾಯಕರ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕೈಗಾರಿಕೋದ್ಯಮ, ತಾಂತ್ರಿಕತೆ, ವೈಜ್ಞಾನಿಕ, ರಾಜಕೀಯ, ಕಲೆಯ ವಿಭಾಗದಲ್ಲಿನ ವಿಶ್ವದ ಪ್ರಭಾವಿ ನಾಯಕರ ಪಟ್ಟಿಯನ್ನು ಟೈಮ್ ನಿಯತಕಾಲಿಕೆ ಮುಂದಿನ ತಿಂಗಳು ಘೋಷಣೆ ಮಾಡಲಿದೆ.

ವಿಶ್ವದ ಪ್ರಭಾವಿ ನಾಯಕರು ಎಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಿರುವ ನಿಯತಕಾಲಿಕೆಯ ಸಂಪಾದಕರು, ಸಂಭಾವ್ಯರ ಪಟ್ಟಿಯಲ್ಲಿರುವವರಿಗೆ ಮತ ಚಲಾಯಿಸುವಂತೆ ಓದುಗರಿಗೆ ಮನವಿ ಮಾಡಿಕೊಂಡಿದ್ದಾರೆ.

ಕಳೆದ ವರ್ಷವೂ ವಿಶ್ವದ 100 ಮಂದಿ ಪ್ರಭಾವಿ ನಾಯಕರ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಮೋದಿ ಅವರ ವ್ಯಕ್ತಿ ಚಿತ್ರವನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರೇ ಮ್ಯಾಗಜೀನ್‌'ಗೆ ಬರೆದು ಕೊಟ್ಟಿದ್ದರು.