ಶುಭಾಶಯ ಕೋರುವಾಗ 'ಬೊಕ್ಕೆ ಬದಲು ಬುಕ್'ಗಳನ್ನು ನೀಡಿ' ಇದು ಪ್ರಧಾನಿ ನರೇಂದ್ರ ಮೋದಿಯವರ ಹೊಸ ಮಂತ್ರ.
ನವದೆಹಲಿ (ಜೂ.17): ಶುಭಾಶಯ ಕೋರುವಾಗ 'ಬೊಕ್ಕೆ ಬದಲು ಬುಕ್'ಗಳನ್ನು ನೀಡಿ' ಇದು ಪ್ರಧಾನಿ ನರೇಂದ್ರ ಮೋದಿಯವರ ಹೊಸ ಮಂತ್ರ.
ಶುಭಾಶಯ ಕೋರಲು ಬೊಕ್ಕೆ ನೀಡುವ ಬದಲು ಬುಕ್;ಗಳನ್ನು ನೀಡುವಂತೆ ನಾನು ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇದನ್ನು ಡಿಜಿಟಲ್ ಪ್ಲಾಟ್ ಫಾರ್ಮ್'ನಲ್ಲೂ ಪ್ರಚಾರ ಮಾಡಬೇಕು. ಇಂತದ್ದೊಂದು ಹೊಸ ಪ್ರಯೋಗ ದೊಡ್ಡ ಆಂದೋಲನವನ್ನೇ ಹುಟ್ಟು ಹಾಕುತ್ತದೆ ಎಂದು ಕೇರಳದಲ್ಲಿ ಆಯೋಜಿಸಿದ್ದ ರೀಡಿಂಗ್ ಮಂತ್ ಸೆಲೆಬ್ರೇಶನ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಓದುವುದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ಜ್ಞಾನಕ್ಕಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ. ಸಾಕ್ಷರತೆಯಲ್ಲಿ ಕೇರಳ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ಸಾಕ್ಷರತಾ ಪ್ರಮಾಣ ಹೆಚ್ಚಾಗಿರುವುದಕ್ಕೆ ಇಲ್ಲಿಯ ಜನರೇ ಕಾರಣ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇರಳ ಶೈಕ್ಷಣಿಕ ಯಶಸ್ಸು ಸಾಧಿಸಲು ಕೇವಲ ಸರ್ಕಾರವೊಂದೇ ಕಾರಣವಲ್ಲ. ನಾಗರೀಕರು, ಸಾಮಾಜಿಕ ಸಂಘಟನೆಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದ್ದಾರೆ.
