Asianet Suvarna News Asianet Suvarna News

ನೊಟು ನಿಷೇಧ ಚರ್ಚಿಸಲು ಪ್ರಧಾನಿ ಬಳಿ ಸಮಯವಿಲ್ಲ, ಆದರೆ ಸಂಗೀತೋತ್ಸವಕ್ಕಾಗಿ ಇದೆ: ಕಾಂಗ್ರೆಸ್ ಕಿಡಿ

ಸಂಗೀತೋತ್ಸವಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡುವುದರಿಂದ ದೇಶ ನಡೆಯುವುದಿಲ್ಲ, ಬದಲಾಗಿ ಸಂಸತ್ತು ಹಾಗೂ ಜನರಿಗೆ ಜವಾಬ್ದಾರರಾಗಿರಬೇಕಾಗುತ್ತದೆ, ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

PM has time for concert but not for parliament discussion

ನವದೆಹಲಿ (ನ.20): ಅಪಮೌಲ್ಯೀಕರಣ ಕುರಿತು ಚರ್ಚೆ ನಡೆಸಲು ಸಂಸತ್ತಿಗೆ ಬಾರದೇ  ಪ್ರಧಾನಿ ನರೇಂದ್ರ ಮೋದಿ ಪರಾರಿಯಾಗಿದ್ದಾರೆ, ಆದರೆ ಅವರ ಬಳಿ ಸಂಗೀತೋತ್ಸವಗಳನ್ನು ಉದ್ದೇಶಿಸಿ ಮಾತನಾಡಲು ಸಮಯವಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಖ್ಯಾತ ಅಂತರಾಷ್ಟ್ರೀಯ ಬ್ಯಾಂಡ್ ಆಗಿರುವ ಕೋಲ್ಡ್ ಪ್ಲೇ ತಂಡ ಭಾಗವಹಿಸಿರುವ ‘ಗ್ಲೋಬಲ್ ಸಿಟಿಜನ್ಸ್ ಫೆಸ್ಟಿವಲ್’ ಮುಂಬೈಯಲ್ಲಿ ಆರಂಭವಾಗಿದೆ. ಈ ಸಂಗೀತೋತ್ಸವದಲ್ಲಿ ಪ್ರಧಾನಿ ಮೋದಿ ಭಾಗವಹಿಸಬೇಕಿತ್ತು, ಆದರೆ ಕಾರಣಾಂತರಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭಿಕರನ್ನುದ್ದೇಶಿಸಿ ಮಾತನಾಡಿದ್ದಾರೆ.

ಸಂಗೀತೋತ್ಸವಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡುವುದರಿಂದ ದೇಶ ನಡೆಯುವುದಿಲ್ಲ, ಬದಲಾಗಿ ಸಂಸತ್ತು ಹಾಗೂ ಜನರಿಗೆ ಜವಾಬ್ದಾರರಾಗಿರಬೇಕಾಗುತ್ತದೆ, ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

ನೋಟು ನಿಷೇಧದಿಂದಾಗಿ 55 ಮಂದಿ ಸಾವನಪ್ಪಿದ್ದಾರೆ,  ಕಳೆದ 11 ದಿನಗಳಲ್ಲಿ ಕೋಟ್ಯಾಂತರ ಜನ ಬ್ಯಾಮಕಿನ ಸರತಿಯಲ್ಲಿ ನಿಂತಿದ್ದಾರೆ, ಬ್ಯಾಂಕುಗಳಲ್ಲಿ ನಗದು ಇಲ್ಲ, ಏಟಿಎಮ್’ಗಳಲ್ಲಿ ನೋಟುಗಳಿಲ್ಲ. ಜನರ ಖತೆಯಲ್ಲಿ ಹಣವಿದೆ, ಆದರೆ ಅದನ್ನು ತೆಗೆಯುವಂತಿಲ್ಲ, ಇವೆಲ್ಲಾವನ್ನು ಚರ್ಚಿಸೋಣವೆಂದರೆ ಚಳಿಗಾಲದ ಅಧಿವೇಶನದಿಂದ ಪ್ರಧಾನಿಯವರೇ ನಾಪತ್ತೆಯಾಗಿದ್ದಾರೆ, ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿಯವರು ಬಂದು ಅಪಮೌಲ್ಯೀಕರಣ ಕ್ರಮದ ಬಗ್ಗೆ ಉತ್ತರ ನೀಡಬೇಕೆಂದು ರಾಜ್ಯಸಭೆ ಮೊದಲ ದಿನದಿಂದ ಆಗ್ರಹಿಸುತ್ತಿದ್ದರೂ ಬಂದಿಲ್ಲ, ಆದರೆ ಮುಂಬೈಯ ಸಂಗೀತ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲು ಸಮಯವಿದೆ, ಎಂದು ಸುರ್ಜೆವಾಲ ಟೀಕಿಸಿದ್ದಾರೆ.

Follow Us:
Download App:
  • android
  • ios