Asianet Suvarna News Asianet Suvarna News

ಮುಸ್ಲಿಂ ಸಮುದಾಯಕ್ಕೆ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ

ಮುಸ್ಲಿಮರ ವಕ್ಫ್ ಆಸ್ತಿಗಳ ಮೇಲುಸ್ತುವಾರಿ ನೋಡಿಕೊಳ್ಳುವ ‘ಮುತವಲ್ಲಿ’ಗಳಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ವಾರ್ಷಿಕ ಪ್ರಶಸ್ತಿ ನೀಡಲು ನಿರ್ಧರಿಸಿದೆ.

PM Good News For Muslims

ನವದೆಹಲಿ: ಮುಸ್ಲಿಮರ ವಕ್ಫ್ ಆಸ್ತಿಗಳ ಮೇಲುಸ್ತುವಾರಿ ನೋಡಿಕೊಳ್ಳುವ ‘ಮುತವಲ್ಲಿ’ಗಳಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ವಾರ್ಷಿಕ ಪ್ರಶಸ್ತಿ ನೀಡಲು ನಿರ್ಧರಿಸಿದೆ.

ವಕ್ಫ್ ಆಸ್ತಿಗಳು ಸದ್ಬಳಕೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಮುತವಲ್ಲಿಗಳ ಮೇಲೆ ಇದ್ದು, ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುವವರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇತ್ತೀಚೆಗೆ ಹಜ್‌ ಯಾತ್ರೆಯ ಸಬ್ಸಿಡಿ ರದ್ದುಗೊಳಿಸಿ ಮುಸ್ಲಿಮರ ಕಲ್ಯಾಣ ಕಾರ‍್ಯಕ್ರಮಗಳತ್ತ ಗಮನ ಹರಿಸುವ ಸರ್ಕಾರದ ಕ್ರಮಗಳ ಪೈಕಿ ಇದೂ ಕೂಡ ಒಂದಾಗಿದೆ.

ವಕ್ಫ್ ಆಸ್ತಿಗಳನ್ನು ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಆರೋಗ್ಯ ಸಂಬಂಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು. ಈ ಕಾರ‍್ಯಗಳಿಗೆ ಉತ್ತಮವಾಗಿ ವಕ್ಫ್ ಆಸ್ತಿಗಳು ಬಳಕೆ ಆಗುವುದನ್ನು ನೋಡಿಕೊಳ್ಳುವ ಮುತವಲಲ್ಲಿಗಳನ್ನು ಗುರುತಿಸಿ ವಾರ್ಷಿಕ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಮುತವಲ್ಲಿಗಳ ರಾಷ್ಟ್ರೀಯ ಸಮಾವೇಶದಲ್ಲಿ ಕೇಂದ್ರ ಅಲ್ಪಸಂಖ್ಯಾತ ಖಾತೆ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದರು.

Follow Us:
Download App:
  • android
  • ios