ಗೌರಿ ಲಂಕೇಶ್ ಅವರನ್ನು ನಾಯಿಗೆ ಹೋಲಿಸಿ, ಅವರ ಹತ್ಯೆಯನ್ನು ಅಪಹಾಸ್ಯ ಮಾಡಿದ ನಾಲ್ವರನ್ನು ಪ್ರಧಾನಿ ಮೋದಿ ಟ್ವಿಟರ್'ನಲ್ಲಿ ಫಾಲೋ ಮಾಡುತ್ತಿದ್ದಾರೆ.
ಬೆಂಗಳೂರು(ಸೆ.07): ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅಪಹಾಸ್ಯ ಮಾಡಿದ ನಾಲ್ವರು ಮಂದಿಯನ್ನು ಟ್ವಿಟರ್'ನಲ್ಲಿ ಫಾಲೋ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ವಿಟರಿಗರು ಬ್ಲಾಕ್ ಮಾಡುತ್ತಿದ್ದಾರೆ. #BlockNarendraModi ಎಂಬ ಅಭಿಯಾನವು ಇಂದು ಟ್ರೆಂಡ್ ಆಗುತ್ತಿದೆ.
ಗೌರಿ ಲಂಕೇಶ್ ಅವರನ್ನು ನಾಯಿಗೆ ಹೋಲಿಸಿ, ಅವರ ಹತ್ಯೆಯನ್ನು ಅಪಹಾಸ್ಯ ಮಾಡಿದ ನಾಲ್ವರನ್ನು ಪ್ರಧಾನಿ ಮೋದಿ ಟ್ವಿಟರ್'ನಲ್ಲಿ ಫಾಲೋ ಮಾಡುತ್ತಿದ್ದಾರೆ. ಜವಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಿ ಮೋದಿ ಇಂಥವರನ್ನು ಯಾಕೆ ಫಾಲೋ ಮಾಡುತ್ತಿದ್ದಾರೆ ಎಂದು ಟ್ವಿಟರಿಗರು ಪ್ರಶ್ನಿಸಿದ್ದಾರೆ. ಅಲ್ಲದೇ ಅವರನ್ನು ಅನ್'ಫಾಲೋ ಮಾಡಬೇಕು ಎಂದು ಪ್ರಧಾನಿಯನ್ನು ಆಗ್ರಹಿಸಿದ್ದಾರೆ.
ಅದನ್ನು ಪ್ರತಿಭಟಿಸುವ ಸಲುವಾಗಿ ಟ್ವಿಟರಿಗರು ತಮ್ಮ ತಮ್ಮ ಖಾತೆಯಿಂದ ನರೇಂದ್ರ ಮೋದಿಯನ್ನು ಬ್ಲಾಕ್ ಮಾಡುವ ಅಭಿಯಾನವನ್ನು ಆರಂಭಿಸಿದ್ದಾರೆ.
