ನೋಟು ನಿಷೇಧದಿಂದ ತೊಂದರೆ ಅನುಭವಿಸುತ್ತಿರುವವರು ಬಡವರು ಮತ್ತು ಮಧ್ಯಮ ವರ್ಗದವರು. ಯಾವುದೇ ತಯಾರಿಯಿಲ್ಲದೇ ನೋಟು ನಿಷೇಧ ಮಾಡಿರುವುದನ್ನು ನೋಡಿದರೆ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವುದು ಸ್ಪಷ್ಟವಾಗುತ್ತದೆ. ಬಿಜೆಪಿಯವರು ತಮ್ಮ ರಾಜಕೀಯ ಹಿತದೃಷ್ಟಿಗಾಗಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಮಾಯಾವತಿ ಆರೋಪಿಸಿದ್ದಾರೆ.  

ಉತ್ತರ ಪ್ರದೇಶ ( ನ.21): ಉತ್ತರ ಪ್ರದೇಶ ಚುನಾವಣೆಯನ್ನು ಉದ್ದೇಶವಾಗಿಟ್ಟುಕೊಂಡು ರಾಜಕೀಯ ಹಿತಾಸಕ್ತಿಗಾಗಿ ಎನ್ ಡಿಎ ಸರ್ಕಾರ ಹಣದ ಅಪಮೌಲ್ಯವನ್ನು(ಡಿಮೊನಿಟೈಸೇಶನ್) ಘೋಷಿಸಿದೆ ಎಂದು ಬಿಎಸ್ ಪಿ ವರಿಷ್ಟೆ ಮಾಯಾವತಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡುವಾಗ " ಪ್ರಧಾನಿ ಮೋದಿಯವರಿಗೆ ಗಟ್ಸ್ ಇದ್ದರೆ ಸಂಸತ್ತಿಗೆ ಬಂದು ವಿರೋಧ ಪಕ್ಷದವರನ್ನು ಎದುರಿಸಲಿ" ಎಂದು ದಿಟ್ಟತನ ತೋರಿಸಿದ್ದಾರೆ.