ಇದು ಟೆರರಿಸ್ಟ್ ಪ್ರೀಮಿಯರ್ ಲೀಗ್: ವಿಡಿಯೋ!

Playing last ball, terrorists on nation’s radar after propaganda video
Highlights

ಕಣಿವೆಯಲ್ಲಿ ಭಯೋತ್ಪಾದಕರ ಕ್ರಿಕೆಟ್ ಆಟ

ಎಕೆ-47 ಬಂದೂಕೇ ಭಯೋತ್ಪಾದಕರಿಗೆ ಸ್ಟಿಕ್

ಭಯೋತ್ಪಾದಕರ ಕ್ರಿಕೆಟ್ ವಿಡಿಯೋ ವೈರಲ್

ಆತಂಕದ ಮುನ್ಸೂಚನೆ ಎಂದ ಸೇನೆ

ಶ್ರೀನಗರ(ಜೂ.19): ಭಯೋತ್ಪಾದನೆ ಕುರಿತು ಕೇಂದ್ರ ಸರ್ಕಾರದ ನಿಲುವು ತಮ್ಮನ್ನು ಬಲಿ ಪಡೆಯಲಿದೆ ಎಂಬುದು ಪ್ರತಿಯೊಬ್ಬ ಭಯೋತ್ಪಾದಕನಿಗೂ ಗೊತ್ತು. ಎಲ್ಲೇ ಬಚ್ಚಿಟ್ಟುಕೊಂಡರೂ ಸೇನೆ ತಮ್ಮನ್ನು ಹೊರಗೆಳೆದು ಬೇಟೆಯಾಡಲಿದೆ ಎಂಬ ಸತ್ಯ ಅರಿತಿರುವ ಭಯೋತ್ಪಾದಕರು, ತಮ್ಮ ಹಣೆಯ ಮೇಲಿನ ಬೆವರಿನ ಹನಿಗಳನ್ನು ಮಾತ್ರ ಮರೆಮಾಚಲು ಪ್ರಯತ್ನ ನಡೆಸುತ್ತಿದ್ದಾರೆ.

ಇದೇ ಕಾರಣಕ್ಕೆ ತಾವು ಯಾವುದಕ್ಕೂ ಹೆದರಲ್ಲ, ಸಾವಿಗೂ ಕೂಡ ಎಂಬ ಸಂದೇಶ ರವಾನಿಸುವ ಪ್ರಯತ್ನವೊಂದು ಹಿಜ್ಬುಲ್ ಮುಜಾಹೀದ್ದೀನ್ ಉಗ್ರವಾದಿಗಳಿಂದ ನಡೆದಿದೆ. ಭಯೋತ್ಪಾದಕರ ತಂಡವೊಂದು ಕ್ರಿಕೆಟ್ ಆಡುವಲ್ಲಿ ತಲ್ಲೀನವಾಗಿರುವ ವಿಡಿಯೋ ಇದೀಗ ವೖರಲ್ ಆಗಿದೆ. ಇಲ್ಲಿನ ಶೋಪಿಯಾನ ಜಿಲ್ಲೆಯಲ್ಲಿ ತರುಣ ಭಯೋತ್ಪಾದಕರ ತಂಡವೊಂದು ಕ್ರಿಕೆಟ್ ಆಡುತ್ತಿರುವ ವಿಡಿಯೋ ಬಿಡುಗಡೆ ಮಾಡಲಾಗಿದೆ.

ತಮ್ಮ ಎಕೆ-47 ಬಂದೂಕನ್ನೇ ಸ್ಟಿಕ್ ಆಗಿ ಬಳಸಿಕೊಂಡು ಈ ಭಯೋತ್ಪಾದಕರು ಕ್ರಿಕೆಟ್ ಆಡುತ್ತಿರುವ ದೃಶ್ಯ ವೖರಲ್ ಆಗಿದೆ. ಅಜ್ಞಾತ ಸ್ಥಳದಲ್ಲಿ ಯಾವುದರ ಪರಿವೇ ಇಲ್ಲದೇ ಕ್ರಿಕೆಟ್ ಆಡುತ್ತಾ ಮೋಜು ಮಾಡುತ್ತಿರುವ ಈ ವಿಡಿಯೋ ಮೂಲದ ಕುರಿತು ಇನ್ನಷ್ಟೇ ಮಾಹಿತಿ ಬಹಿರಂಗವಾಗಬೇಕಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೇನೆ, ಈ ವಿಡಿಯೋ ಮೂಲದ ಕುರಿತು ತನಿಖೆ ನಡೆಸುತ್ತಿದ್ದು, ಖಂಡಿತ ಈ ಭಯೋತ್ಪಾದಕರು ಆತಂಕ ತಂದೊಡ್ಡಿದ್ದಾರೆ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ-Playing last ball, terrorists on nation’s radar after propaganda video

loader