ಗ್ರಾಹಕರೇ ಹುಷಾರ್, ಬಿಳಿ ಇರೋದೆಲ್ಲಾ ಸಕ್ಕರೆಯಲ್ಲ.. ಪ್ಲಾಸ್ಟಿಕ್ ಸಕ್ಕರೆ ಆರೋಗ್ಯಕ್ಕೆ ಕುತ್ತಾಗಬಹುದು ಹುಷಾರ್....
ಹಾಸನ: ಪ್ಲಾಸ್ಟಿಕ್ ಅಕ್ಕಿ ಆಯ್ತು, ಪ್ಲಾಸ್ಟಿಕ್ ಉಪ್ಪು ಆಯ್ತು, ಈಗ ಪ್ಲಾಸ್ಟಿಕ್ ಸಕ್ಕರೆಯೂ ಮಾರ್ಕೆಟ್ಗೆ ಕಾಲಿಟ್ಟಿದೆ.
ಅಕ್ಕಿ, ಮೊಟ್ಟೆಆಯ್ತು ಈಗ ಬಂದಿದೆ ಪ್ಲಾಸ್ಟಿಕ್ ಸಕ್ಕರೆ!
ಹಾಸನದ ಹಳೇ ಬಸ್ ನಿಲ್ದಾಣ ಸಮೀಪದ ವಾಸವಿ ಪ್ರಾವಿಷನ್ ಸ್ಟೋರ್’ನಲ್ಲಿ ಪ್ಲಾಸ್ಟಿಕ್ ಸಕ್ಕರೆ ಪತ್ತೆಯಾಗಿದೆ. ಶಿವಕುಮಾರ್ ಎಂಬುವರು ಸಕ್ಕರೆ ಖರೀದಿಸಿ, ಮನೆಯಲ್ಲಿ ಟೀ ತಯಾರಿಸಿದಾಗ ನಕಲಿ ಸಕ್ಕರೆಯ ಬಂಡವಾಳ ಬಯಲಾಗಿದೆ.
ಈ ವೇಳೆ ಅಸಲಿ ಸಕ್ಕರೆ ಕರಗಿದರೆ, ಪ್ಲಾಸ್ಟಿಕ್ ಸಕ್ಕರೆ ಪಾತ್ರೆಯ ತಳಭಾಗದಲ್ಲಿ ಉಳಿದುಕೊಂಡಿದೆ. ಪ್ಲಾಸ್ಟಿಕ್ ಸಕ್ಕರೆಯಿಂದ ಗ್ರಾಹಕರು ಶಾಕ್ ಆಗಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ.
