ಹುಬ್ಬಳ್ಳಿಯ ಜನರಲ್ಲಿ ಈಗ ಪ್ಲಾಸ್ಟಿಕ್‌ ಪಾಪಡಿ (ಹಪ್ಪಳ) ಭಯ ಹುಟ್ಟಿಸಿದೆ. ಈ ಹಿಂದೆ ಪ್ಲಾಸ್ಟಿಕ್‌ ಅಕ್ಕಿ, ಸಕ್ಕರೆ, ಮೊಟ್ಟೆ ಬಂದಿದೆ ಎಂಬ ಸಂಶಯ ಜನರಲ್ಲಿ ಹುಟ್ಟಿಕೊಂಡಿತ್ತು. ಆದರೆ ನಂತರದಲ್ಲಿ ಅದು ಪ್ಲಾಸ್ಟಿಕ್ ಅಲ್ಲ ಅನ್ನೊದು ಬಯಲಾಗಿತ್ತು. ಇದೀಗ ಮತ್ತೆ ಈ ರಾಸಾಯನಿಕ, ಪ್ಲಾಸ್ಟಿಕ್ ಮಿಶ್ರಿಯ ಪಾಪಡಿಗಳು  ಮಾರಾಟವಾಗುತ್ತಿವೆ ಎಂಬ ಸಂಶಯ ಜನರಲ್ಲಿ ಮೂಡಿದೆ.

ಹುಬ್ಬಳ್ಳಿ (ಅ.11): ಹುಬ್ಬಳ್ಳಿಯ ಜನರಲ್ಲಿ ಈಗ ಪ್ಲಾಸ್ಟಿಕ್‌ ಪಾಪಡಿ (ಹಪ್ಪಳ) ಭಯ ಹುಟ್ಟಿಸಿದೆ. ಈ ಹಿಂದೆ ಪ್ಲಾಸ್ಟಿಕ್‌ ಅಕ್ಕಿ, ಸಕ್ಕರೆ, ಮೊಟ್ಟೆ ಬಂದಿದೆ ಎಂಬ ಸಂಶಯ ಜನರಲ್ಲಿ ಹುಟ್ಟಿಕೊಂಡಿತ್ತು. ಆದರೆ ನಂತರದಲ್ಲಿ ಅದು ಪ್ಲಾಸ್ಟಿಕ್ ಅಲ್ಲ ಅನ್ನೊದು ಬಯಲಾಗಿತ್ತು. ಇದೀಗ ಮತ್ತೆ ಈ ರಾಸಾಯನಿಕ, ಪ್ಲಾಸ್ಟಿಕ್ ಮಿಶ್ರಿಯ ಪಾಪಡಿಗಳು ಮಾರಾಟವಾಗುತ್ತಿವೆ ಎಂಬ ಸಂಶಯ ಜನರಲ್ಲಿ ಮೂಡಿದೆ.

ನೋಡಲು ಉದ್ದವಾಗಿ, ಅತ್ಯಂತ ಆಕರ್ಷಕವಾಗಿರುವ ಈ ಪಾಪಡ್'ಗಳ ಆಕಾರ ಮತ್ತು ಬಣ್ಣಕ್ಕೆ ಮಕ್ಕಳು ಮರುಳಾಗುತ್ತಿವೆ. ಆದರೆ ಪಾಪಡ್'ಗಳಿಗೆ ಕಡ್ಡಿ ಕೊರೆದು ಬೆಂಕಿ ಹಚ್ಚಿದಾಗ ಹೊತ್ತಿ ಕಂಡು ಪ್ಲಾಸ್ಟಿಕ್ ಮಾದರಿಯಲ್ಲಿ ಮೆಲ್ಟ್ ಆಗುತ್ತಿದೆ. ಇರು ಜನರಲ್ಲಿ ಆತಂಕ ಮೂಡಿಸಿದೆ. ಪಾಪಡ್'ನಲ್ಲೂ ಪ್ಲಾಸ್ಟಿಕ್ ಇರಬಹುದಾ? ಎಂಬ ಆತಂಕ ಸೃಷ್ಟಿಸಿದೆ. ಆದರೆ ದುಬಾರಿ ಬೆಲೆಯ ಪ್ಲಾಸ್ಟಿಕ್ ಬಳಸಿ ಅಗ್ಗದ ದರದ ಪಾಪಡ್ ತಯಾರಿಸಲು ಹೇಗೆ ಸಾಧ್ಯ? ಎಂದು ತಿಳಿಯುತ್ತಿಲ್ಲ. ಇದರಲ್ಲಿಯೂ ಪ್ಲಾಸ್ಟಿಕ್ ಇರಬಹುದು ಎಂದು ಸಂಶಯ ಮತ್ತು ಆತಂಕ ಸೃಷ್ಟಿಯಾಗಿದೆ‌.

ಈವರೆಗೆ ಇದ್ದ ಪಾಪಡ್ ಗಳೊಂದಿಗೆ ಈಗ ಕೆಂಪನೆಯ, ಉದ್ದದ ಪಾಪಡ್ ಗಳನ್ನ ನಗರದಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದು, ಶಾಲೆಗಳ ಅಕ್ಕ ಪಕ್ಕದಲ್ಲಿ ಎಗ್ಗಿಲ್ಲದೇ ಮಾರಾಟ ಮಾಡಲಾಗುತ್ತಿದೆ. ಸಾಮಾನ್ಯ ಪಾಪಡಿ ಗಳಿಗಿಂತ ಈ ಪಾಪಡ್ ಗಳು ನೋಡಲು ತಿನ್ನಲು ವಿಭಿನ್ನವಾಗಿದ್ದು ಅಲ್ಲದೇ ತಿಂದರೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆಯಂತೆ. ಇನ್ನು ಇವುಗಳಿಗೆ ಬೆಂಕಿ ಹಚ್ಚಿದರೆ ಪ್ಲಾಸ್ಟಿಕ್ ಹಾಗೇ ಉರಿದು ಕೊನೆಯಲ್ಲಿ ಪ್ಲಾಸ್ಟಿಕ್‌ ಮಾದರಿಯ ತ್ಯಾಜ್ಯದ ವಸ್ತು ಹೊರಹೊಮ್ಮತ್ತಿದೆ.

ಒಟ್ಟಾರೆ ಪಾಪಾಡೆಯಲ್ಲಿ ಪ್ಲಾಸ್ಟಿಕ್ ಇದೆ ಎಂಬ ಆತಂಕ ದಟ್ಟವಾಗಿ ಕೇಳಿ ಬರುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಮೊದಲು ಆಹಾರ ಇಲಾಖೆ ‌ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.