Asianet Suvarna News Asianet Suvarna News

ಕಲಬುರಗಿಯಲ್ಲಿ ಪ್ಲಾಸ್ಟಿಕ್ ಮೊಟ್ಟೆ

ಕೋಳಿ ಮೊಟ್ಟೆಯಲ್ಲಿರುವ ಆಲ್ಬುಮಿನ್‌(ಬಿಳಿ ಪದಾರ್ಥ) ಈ ಕೃತಕ ಮೊಟ್ಟೆಯಲ್ಲಿ ಇಲ್ಲ. ಅದರ ಬದಲು ಕೃತಕವಾಗಿ ತಯಾರಿಸಲಾಗುವ ಜಿಲೆಟಿನ್‌ ಹಾಗೂ ಸೋಡಿಯಂ ಆಲ್ಜಿನೆಟ್‌ ರಾಸಾಯನಿಕಗಳನ್ನು ಬಳಸಲಾಗುತ್ತದೆ. ನೋಡಲು ಮಾಮೂಲಿ ಮೊಟ್ಟೆಯಂತೆಯೇ ಕಾಣುವ ಇವುಗಳ ಗಾತ್ರ ಹಾಗೂ ಬಣ್ಣದಲ್ಲೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದರೆ, ಈ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ.

plastic eggs found in kalburgi
  • Facebook
  • Twitter
  • Whatsapp

ಕಲಬುರ್ಗಿ: ಪ್ಲಾಸ್ಟಿಕ್‌ ಅಕ್ಕಿ, ಕ್ಯಾಬೇಜ್‌ ಆಯ್ತು, ಇದೀಗ ಪ್ಲಾಸ್ಟಿಕ್‌ ತತ್ತಿ ಸರದಿ. ಕಲಬುರಗಿ ಮಾರುಕಟ್ಟೆಯಲ್ಲಿ ಕೃತಕ ಮೊಟ್ಟೆ ಮಾರಾಟವಾಗುತ್ತಿರುವ ವಿಚಾರ ಇದೀಗ ಪ್ರಯೋಗದಿಂದ ದೃಢಪಟ್ಟಿದೆ. ಈ ರೀತಿಯ ಮೊಟ್ಟೆಗಳು ಕೊಲ್ಕತಾ ದಲ್ಲಿ ಮಾರಾಟವಾಗುತ್ತಿರುವ ಕುರಿತು ವರದಿಯಾಗಿತ್ತು. ಕರ್ನಾಟಕದಲ್ಲೇ ಈ ರೀತಿಯ ಮೊಟ್ಟೆಮಾರಾಟ ವಿಚಾರ ಇದೇ ಮೊದಲ ಸಲ ಬಹಿರಂಗವಾಗಿದೆ. ಬ್ರೇಕ್‌ ಥ್ರೂ ಸೈನ್ಸ್‌ ಸೊಸೈಟಿಯ ಕಲಬುರಗಿ ಜಿಲ್ಲಾ ಸಮಿತಿ, ಗುಲ್ಬರ್ಗಾ ವಿವಿ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳ ತಂಡ ಈ ಶೋಧ ನಡೆಸಿದೆ. ಅವರಿಂದಾಗಿ ಈ

ಕೃತಕ ಮೊಟ್ಟೆಗಳು ಜಿಲ್ಲೆಯಲ್ಲಿ ಮಾರಾಟ ಆಗುತ್ತಿರುವ ಸತ್ಯ ಬೆಳಕಿಗೆ ಬಂದಿದೆ. ಕಲಬುರಗಿಯ ಸ್ಥಳೀಯ ಮಾರುಕಟ್ಟೆಯಿಂದಲೇ ಮೊಟ್ಟೆಗಳನ್ನು ಖರೀದಿಸಿ ತಂದು ವಿದ್ಯಾರ್ಥಿಗಳು ಈ ಸಂಶೋಧನೆ ನಡೆಸಿದ್ದಾರೆ.

ವ್ಯತ್ಯಾಸವೇ ಗೊತ್ತಾಗಲ್ಲ: ಕೋಳಿ ಮೊಟ್ಟೆಯಲ್ಲಿರುವ ಆಲ್ಬುಮಿನ್‌(ಬಿಳಿ ಪದಾರ್ಥ) ಈ ಕೃತಕ ಮೊಟ್ಟೆಯಲ್ಲಿ ಇಲ್ಲ. ಅದರ ಬದಲು ಕೃತಕವಾಗಿ ತಯಾರಿಸಲಾಗುವ ಜಿಲೆಟಿನ್‌ ಹಾಗೂ ಸೋಡಿಯಂ ಆಲ್ಜಿನೆಟ್‌ ರಾಸಾಯನಿಕಗಳನ್ನು ಬಳಸಲಾಗುತ್ತದೆ. ನೋಡಲು ಮಾಮೂಲಿ ಮೊಟ್ಟೆಯಂತೆಯೇ ಕಾಣುವ ಇವುಗಳ ಗಾತ್ರ ಹಾಗೂ ಬಣ್ಣದಲ್ಲೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದರೆ, ಈ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ.

ಪ್ಲಾಸ್ಟಿಕ್‌ ಮೊಟ್ಟೆಗುರುತಿಸೋದು ಹೀಗೆ:
* ನಿಜವಾದ ಮೊಟ್ಟೆನೀರಿನಲ್ಲಿ ಮುಳುಗಿದರೆ, ಕೃತಕ ಕೊಳೆತ ಮೊಟ್ಟೆಯ ರೀತಿ ನೀರಿನಲ್ಲಿ ತೇಲುತ್ತದೆ. 
* ಒಡೆದಿಲ್ಲದಿದ್ದರೆ ಕೋಳಿ ಮೊಟ್ಟೆಯ ಹಳದಿ ಭಾಗ ಬಿಳಿಯ ಭಾಗದೊಂ​ದಿಗೆ ಬೆರೆಯದೆ ಪ್ರತ್ಯೇಕವಾಗಿರು​ತ್ತದೆ. ಆದರೆ ಕೃತಕ ಮೊಟ್ಟೆಒಡೆಯುತ್ತಿದ್ದಂತೆ ಬಿಳಿಯ ಭಾಗದೊಂದಿಗೆ ಹಳದಿ ಭಾಗ ಬೆರೆತು ಹೋಗುತ್ತದೆ.
* ಕೃತಕ ಮೊಟ್ಟೆಗೆ ಹೋಲಿಸಿದರೆ ಸಾಮಾನ್ಯ ಮೊಟ್ಟೆಯಲ್ಲಿ ಬಿಳಿಯ ಭಾಗವನ್ನು ರಕ್ಷಿಸುವ ಪದರ ದಪ್ಪವಾಗಿರುತ್ತದೆ.
* ಬೇಯಿಸಿದಾಗ ಈ ಮೊಟ್ಟೆಮಾ​ಮೂಲಿ ಮೊಟ್ಟೆಯಂತೆ ಕಂಡರೂ, ರುಚಿಯಲ್ಲಿ ವ್ಯತ್ಯಾಸವಿರುತ್ತದೆ.

ಜಿಲ್ಲಾಡಳಿತ ಕೂಡಲೇ ಈ ವಿಷಯದ ಬಗ್ಗೆ ಗಮನಹರಿಸಿ ಕೃತಕ ಮೊಟ್ಟೆಗಳ ಮಾರಾಟದ ಮೇಲೆ ನಿರ್ಬಂಧ ಹೇರಬೇಕು ಹಾಗೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಕಲಬುರಗಿ ಸೇರಿ ಇನ್ನೂ ಎಲ್ಲೆಲ್ಲಿ ಇಂತಹ ಅಪಾಯಕಾರಿ ಪ್ಲಾಸ್ಟಿಕ್‌ ಮೊಟ್ಟೆಮಾರಾಟ ಸಾಗಿದೆ ಎಂಬುದನ್ನು ಗುರುತಿಸಿ ಕ್ರಮಕ್ಕೆ ಮುಂದಾಗಬೇಕು.
- ಅಭಯಾ ದಿವಾಕರ್‌, ಅಧ್ಯಕ್ಷ, ಬ್ರೆಕ್‌ ಥ್ರೂ ಸೈನ್ಸ್‌ ಸೊಸೈಟಿ, ಕಲಬುರಗಿ

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios