ಬಸವೇಶ್ವರ ವೃತ್ತದಿಂದ ಹೆಬ್ಬಾಳ​ದವರೆಗೆ ಬಿಡಿಎ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಯೋಜನೆಯನ್ನು ಗೋಪ್ಯ­ವಾಗಿರಿಸಲಾಗುತ್ತಿದ್ದು, ಸಾರ್ವಜನಿಕ​ರಿಗೆ ಮಾಹಿತಿ ನೀಡುತ್ತಿಲ್ಲ. ಯೋಜನೆ ಅನುಷ್ಠಾನಕ್ಕೂ ಮುನ್ನ ಬಿಡಿಎ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಯೋಜನೆ ಕುರಿತಾದ ಲೆಕ್ಕಪತ್ರಗಳನ್ನು ಕಂಟ್ರೋಲರ್‌ ಆಂಡ್‌ ಆಡಿಟರ್‌ ಜನರಲ್‌ ನಡೆಸಬೇಕು ಎಂದು ಆಗ್ರಹಿಸಿ ನಮ್ಮ ಬೆಂಗಳೂರು ಪ್ರತಿಷ್ಠಾ​ನವು ರಿಟ್‌ ಅರ್ಜಿ ಸಲ್ಲಿಸಿದ್ದು, ಉಚ್ಛ ನ್ಯಾಯಾಲಯವು ಅರ್ಜಿ ಮೇಲಿನ ತೀರ್ಪು ಆಧರಿಸಿಯೇ ಯೋಜನೆ ಅನುಷ್ಠಾನಗೊಳಿ​ಸುವಂತೆ ತಾಕೀತು ಮಾಡಿದೆ. 

ಬೆಂಗಳೂರು (ಅ.10): ಬಸವೇಶ್ವರ ವೃತ್ತದಿಂದ ಹೆಬ್ಬಾಳ​ದವರೆಗೆ ಬಿಡಿಎ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಯೋಜನೆಯನ್ನು ಗೋಪ್ಯ­ವಾಗಿರಿಸಲಾಗುತ್ತಿದ್ದು, ಸಾರ್ವಜನಿಕ​ರಿಗೆ ಮಾಹಿತಿ ನೀಡುತ್ತಿಲ್ಲ. ಯೋಜನೆ ಅನುಷ್ಠಾನಕ್ಕೂ ಮುನ್ನ ಬಿಡಿಎ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಯೋಜನೆ ಕುರಿತಾದ ಲೆಕ್ಕಪತ್ರಗಳನ್ನು ಕಂಟ್ರೋಲರ್‌ ಆಂಡ್‌ ಆಡಿಟರ್‌ ಜನರಲ್‌ ನಡೆಸಬೇಕು ಎಂದು ಆಗ್ರಹಿಸಿ ನಮ್ಮ ಬೆಂಗಳೂರು ಪ್ರತಿಷ್ಠಾ​ನವು ರಿಟ್‌ ಅರ್ಜಿ ಸಲ್ಲಿಸಿದ್ದು, ಉಚ್ಛ ನ್ಯಾಯಾಲಯವು ಅರ್ಜಿ ಮೇಲಿನ ತೀರ್ಪು ಆಧರಿಸಿಯೇ ಯೋಜನೆ ಅನುಷ್ಠಾನಗೊಳಿ​ಸುವಂತೆ ತಾಕೀತು ಮಾಡಿದೆ.

ಯೋಜನೆಗೆ ತಡೆ ನೀಡುವಂತೆ ರಿಟ್‌ ಅರ್ಜಿಯಲ್ಲಿ ಮನವಿ ಮಾಡಲಾಗಿದ್ದು, ಯೋಜನೆಯು ರಿಟ್‌ ಅರ್ಜಿಯ ಆದೇಶಕ್ಕೆ ಅನ್ವಯವಾಗಿರುತ್ತ​ದೆಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಸೇತುವೆ ನಿರ್ಮಾಣಕ್ಕೆ ಒಟ್ಟು ರೂ.1800 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸ­ಲಾಗಿದೆ. ಮೇಕ್ರಿ ವೃತ್ತದ ಮೂಲಕ ಹಾದು ಹೋಗುವ ಈ ಉಕ್ಕಿನ ಸೇತುವೆಯ ವಿವರ­ವಾದ ಯೋಜ​ನಾ ವರದಿ(ಡಿಪಿಆರ್‌), ಕಾರ್ಯ ಸಾಧ್ಯತೆ, ಯೋಜನೆಗೆ ಹಣಕಾಸು ಹೊಂದಾಣಿಕೆ ಇವುಗಳ ಕುರಿತಾದ ಮಾಹಿತಿ­ಗಳನ್ನು ಸಾರ್ವ​ಜನಿ​ಕರಿಗೆ ನೀಡಲಾ­ಗುತ್ತಿಲ್ಲ. ಹೀಗಾಗಿ ಈ ಯೋಜನೆಯು ಸಾರ್ವ­ಜನಿಕ ಹಿತಾಸಕ್ತಿ ಹೊಂದಿ​ರದೇ ಸ್ವೇಚ್ಛೆ­ಯಿಂದ, ಕಾನೂನುಬಾಹಿ​ರವಾಗಿ, ತರ್ಕ­ರಹಿತ­ವಾಗಿ ರೂಪಿತವಾಗಿರು​ವಂತಿದೆ. ಯೋಜ­ನೆಯ ಕ್ರಮ​ಬದ್ಧತೆಯೂ ಸಂಶ­ಯಾಸ್ಪದವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಒಟ್ಟು 6.7ಕಿಮೀ ಉದ್ದದ ಉಕ್ಕಿನ ಮೇಲ್ಸೆತುವೆಗೆ ಸಚಿವ ಸಂಪುಟವು ಅನುಮೋದನೆ ನೀಡಿದ್ದು ವಿಮಾನ ನಿಲ್ಧಾಣಕ್ಕೆ ಜೋಡಿಸಲು ಉದ್ದೇಶಿಸಲಾಗಿದೆ. ಮೊದಲು ರೂ.1350 ಕೋಟಿ ಇದ್ದ ಯೋಜನೆ ರೂ.1800ಕೋಟಿಗೆ ಏರಿಕೆಯಾ­ಗಿದ್ದು 24 ತಿಂಗಳಲ್ಲಿ ಪೂರ್ಣಗೊಳ್ಳುವುದಾಗಿ ಹೇಳಲಾ​ಗಿದೆ. 55 ಸಾವಿರ ಟನ್‌ ಉಕ್ಕು ಬಳಸಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ವಾಹನಗಳ ದಟ್ಟಣೆ ಕಡಿಮೆ ಮಾಡಲು ಈ ಸೇತುವೆ ನಿರ್ಮಾಣ ಮಾಡುತ್ತಿದ್ದು ನಿರ್ಮಾಣ ಸಂಸ್ಥೆ ಲಾರ್ಸೆನ್‌ ಅಂಡ್‌ ಟಬೋ ಟೆಂಡರ್‌ ನೀಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಒಟ್ಟು ಯೋಜನೆಯಲ್ಲಿ ಪಾರ­ದರ್ಶಕತೆ ಕಂಡು ಬರುತ್ತಿಲ್ಲ. ಸಾರ್ವಜನಿಕವಾಗಿಯೂ ಯೋಜ​ನೆ ಸಾಧಕ ಬಾಧಕ ಕುರಿತು ಚರ್ಚೆ ನಡೆಸಲಾಗಿಲ್ಲ. ಯೋಜನೆ ಕುರಿತಾಗಿ ಜನಪ್ರ​ತಿನಿಧಿಗಳು ನೀಡುತ್ತಿರುವ ಹೇಳಿಕೆ ಹಾಗೂ ಯೋಜನೆಯ ವಿವರಗಳು ತಾಳೆಯಾ​ಗುತ್ತಿಲ್ಲ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಸೇರಿ​ದಂತೆ ಯೋಜನೆಯ ಅನುಷ್ಠಾನ ಕುರಿತ ಯಾವುದೇ ಅಂಶಗಳ ಮಾಹಿತಿ ಸಾರ್ವಜನಿಕರ ಪರಿಶೀಲ​ನೆಗೆ ದೊರೆಯುತ್ತಿಲ್ಲವೆಂದು ಅರ್ಜಿ ತಿಳಿಸಿದೆ.

ಶೇ.40ರಷ್ಟುಹೆಚ್ಚು ವೆಚ್ಚ: ಯೋಜನೆಯನ್ನು ಇದೀಗ ಅಂದಾಜಿಸಿರುವ ವೆಚ್ಚಕ್ಕಿಂತಲೂ ಶೇ.40ರಷ್ಟುಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಬಹುದೆಂದು ಕೆಲವು ತಜ್ಞರು ಅಂದಾ­ಜಿಸಿದ್ದು ಯೋಜನೆಯ ವೆಚ್ಚವನ್ನು ಯಾವ ಮೂಲಗಳಿಂದ ಭರಿಸಲಾ­ಗುತ್ತಿದೆ ಎಂಬ ಕುರಿತು ಸ್ಪಷ್ಟತೆ ಇಲ್ಲದಾಗಿದೆ. ಸೇತುವೆ ನಿರ್ಮಾಣಕ್ಕೆ ಅಗತ್ಯ ಭೂಮಿ ಇನ್ನೂ ಸ್ವಾಧೀನಪಡಿಸಿಕೊಂಡಿಲ್ಲ. ಭೂ ಸ್ವಾಧೀನ ಮಾಡದೇ ಆರಂಭಿಸುವ ಬಹುತೇಕ ಯೋಜನೆಗಳು ಅರ್ಧದಲ್ಲೇ ಸ್ಥಗಿತಗೊಂಡ ಉದಾಹರಣೆಗಳಿದ್ದು ಈ ಯೋಜನೆಗೂ ಅದೇ ಗತಿ ಉಂಟಾಗಬಹುದು ಎಂದು ರಿಟ್‌ ಅರ್ಜಿಯಲ್ಲಿ ವಿವರಿಸಲಾಗಿದೆ.

(ಸಾಂದರ್ಭಿಕ ಚಿತ್ರ)