ಗುಜರಾತ್ ಶಾಸಕರಿಗೆ ಆಶ್ರಯ ಕೊಟ್ಟಿರುವ ಡಿಕೆ ಶಿವಕುಮಾರ್ ಅವರ ಮೇಲೆ ಐಟಿ ಅಧಿಕಾರಿಗಳ ದಂಡುಗಳೇ ದಾಳಿ ಮಾಡಿವೆ. ಡಿಕೆಶಿ ಅವರ ಮನೆಗಳು ಹಾಗೂ ಅವರ ಸಂಬಂಧಿಕರು ಮತ್ತು ಆಪ್ತರ ಮೇಲೂ ಐಟಿ ರೇಡ್ ಆಗಿದೆ. ದೆಹಲಿಯಲ್ಲಿರುವ ಡಿಕೆಶಿ ನಿವಾಸದ ಮೇಲೂ ರೇಡ್ ಆಗಿದೆ. ಒಟ್ಟು 39 ಸ್ಥಳಗಳ ಮೇಲೆ ಇಂದು ಐಟಿ ರೇಡ್ ನಡೆಸಿದೆ.

ಬೆಂಗಳೂರು(ಆ. 02): ಗುಜರಾತ್ ಶಾಸಕರಿಗೆ ಆಶ್ರಯ ಕೊಟ್ಟಿರುವ ಡಿಕೆ ಶಿವಕುಮಾರ್ ಅವರ ಮೇಲೆ ಐಟಿ ಅಧಿಕಾರಿಗಳ ದಂಡುಗಳೇ ದಾಳಿ ಮಾಡಿವೆ. ಡಿಕೆಶಿ ಅವರ ಮನೆಗಳು ಹಾಗೂ ಅವರ ಸಂಬಂಧಿಕರು ಮತ್ತು ಆಪ್ತರ ಮೇಲೂ ಐಟಿ ರೇಡ್ ಆಗಿದೆ. ದೆಹಲಿಯಲ್ಲಿರುವ ಡಿಕೆಶಿ ನಿವಾಸದ ಮೇಲೂ ರೇಡ್ ಆಗಿದೆ. ಒಟ್ಟು 39 ಸ್ಥಳಗಳ ಮೇಲೆ ಇಂದು ಐಟಿ ರೇಡ್ ನಡೆಸಿದೆ.

ಎಲ್ಲೆಲ್ಲಿ ಐಟಿ ರೇಡ್?

1) ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸ

2) ಬೆಂಗಳೂರಿನ ಆರ್'ಟಿ ನಗರದಲ್ಲಿರುವ ಡಿಕೆಶಿ ಆಪ್ತ ಜ್ಯೋತಿಷಿ ದ್ವಾರಕಾನಾಥ್ ಗುರೂಜಿ ನಿವಾಸ (30 ವರ್ಷಗಳಿಂದ ಡಿಕೆಶಿ ಜೊತೆ ಗುರೂಜಿ ಆಪ್ತ)

3) ಬೆಂಗಳೂರಿನ ಚಾಲುಕ್ಯ ರಸ್ತೆಯಲ್ಲಿರುವ ಡಿಕೆಶಿ ಕಚೇರಿ

4) ಡಿಕೆಶಿ ಹುಟ್ಟೂರು ಕನಕಪುರದ ದೊಡ್ಡಹಾಲಹಳ್ಳಿಯಲ್ಲಿರುವ ಅವರ ನಿವಾಸ

5) ಡಿಕೆಶಿಯವರ ಸೋದರ ಸಂಬಂಧಿ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ರವಿಯವರ ರಾಮನಗರ ನಿವಾಸದ ಮೇಲೆ ದಾಳಿ (ಈಗಲ್ಟನ್ ರೆಸಾರ್ಟ್'ನಲ್ಲಿ ಶಾಸಕರ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ರವಿಯವರೇ)

6) ಡಿಕೆಶಿ ಸೋದರ ಡಿಕೆ ಸುರೇಶ್ ಅವರ ಕನಕಪುರ ನಿವಾಸದ ಮೇಲೆ ದಾಳಿ

7) ಬೆಂಗಳೂರು ಹೊರವಲಯ ಬಿಡದಿಯಲ್ಲಿರುವ ಈಗಲ್ಟನ್ ರೆಸಾರ್ಟ್ ಮೇಲೆ ದಾಳಿ

8) ಡಿಕೆಶಿ ಕಾರು ಚಾಲಕ ನಾಗರಾಜ್ ವಿಚಾರಣೆ

9) ಮೈಸೂರು ಇಟ್ಟಿಗೆಗೂಡಿನಲ್ಲಿರುವ ಡಿಕೆಶಿ ಮಾವ ಆರ್.ತಿಮ್ಮಯ್ಯನವರ ನಿವಾಸ

10) ಮೈಸೂರಿನ ದಟ್ಟಗಳ್ಳಿಯ ಟಿ.ಕೆ.ಲೇಔಟ್'ನಲ್ಲಿರುವ ಡಿಕೆಶಿ ಸಂಬಂಧಿಕರ ನಿವಾಸ

11) ದೆಹಲಿಯ ಸಫ್ದರ್'ಜಂಗ್ ಎನ್'ಕ್ಲೇವ್'ನಲ್ಲಿರುವ ಡಿಕೆಶಿ ನಿವಾಸ

12) ದೆಹಲಿಯ ಆರ್'ಕೆ ಪುರಂನ ಸೆಕ್ಟರ್-2ನಲ್ಲಿರುವ ಡಿಕೆಶಿ ಆಪ್ತ ಸಹಾಯಕ ಆಂಜನೇಯನವರ ನಿವಾಸ