ಕಳೆದ ಒಂದು ತಿಂಗಳಲ್ಲಿ ನಡೆದ ಮಹಿಳೆಯರ ಮೇಲಿನ ಹಿಂಸಾಚಾರ, ಲೈಂಗಿಕ ದೌರ್ಜನ್ಯಗಳನ್ನು ನೋಡಿದಾಗ ರಾಜ್ಯ ರಾಜಧಾನಿ ಬೆಂಗಳೂರು ಮಹಿಳೆಯರಿಗೆ ಎಷ್ಟು ಸುರಕ್ಷಿತ? ಎನ್ನುವ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ನಗರದಲ್ಲಿ ಹೆಣ್ಣುಮಕ್ಕಳು ಒಂಟಿಯಾಗಿ ಹೊರಗಡೆ ಓಡಾಡಲು ಭಯಪಡುವಂತಾಗಿದೆ. ನಾವಿಲ್ಲಿ ಸೇಫಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಈ ಭಯಮಿಶ್ರಿತ ವಾತಾವರಣವನ್ನು ಹೋಗಲಾಡಿಸಿ ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡಲು ಭಯಮುಕ್ತ ಬೆಂಗಳೂರನ್ನು ನಿರ್ಮಾಣ ಮುಂದಾಗಿದೆ ನಮ್ಮ ಬೆಂಗಳೂರು ಫೌಂಡೇಶನ್. ‘ಪಿಂಕಲೂರು’ ಎನ್ನುವ ಅಭಿಯಾನವನ್ನು ಶುರುಮಾಡಿದೆ.
ಬೆಂಗಳೂರು (ಜ.30): ಕಳೆದ ಒಂದು ತಿಂಗಳಲ್ಲಿ ನಡೆದ ಮಹಿಳೆಯರ ಮೇಲಿನ ಹಿಂಸಾಚಾರ, ಲೈಂಗಿಕ ದೌರ್ಜನ್ಯಗಳನ್ನು ನೋಡಿದಾಗ ರಾಜ್ಯ ರಾಜಧಾನಿ ಬೆಂಗಳೂರು ಮಹಿಳೆಯರಿಗೆ ಎಷ್ಟು ಸುರಕ್ಷಿತ? ಎನ್ನುವ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ನಗರದಲ್ಲಿ ಹೆಣ್ಣುಮಕ್ಕಳು ಒಂಟಿಯಾಗಿ ಹೊರಗಡೆ ಓಡಾಡಲು ಭಯಪಡುವಂತಾಗಿದೆ. ನಾವಿಲ್ಲಿ ಸೇಫಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಈ ಭಯಮಿಶ್ರಿತ ವಾತಾವರಣವನ್ನು ಹೋಗಲಾಡಿಸಿ ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡಲು ಭಯಮುಕ್ತ ಬೆಂಗಳೂರನ್ನು ನಿರ್ಮಾಣ ಮುಂದಾಗಿದೆ ನಮ್ಮ ಬೆಂಗಳೂರು ಫೌಂಡೇಶನ್. ‘ಪಿಂಕಲೂರು’ ಎನ್ನುವ ಅಭಿಯಾನವನ್ನು ಶುರುಮಾಡಿದೆ.
ಮಹಿಳಾ ಸುರಕ್ಷತೆಯೇ ಪಿಂಕಲೂರಿನ ಆದ್ಯತೆ. ನೀವು ಯಾರು, ಎಲ್ಲಿಯವರು ಎಂಬುದನ್ನೆಲ್ಲಾ ಪರಿಗಣಿಸದೇ ನಿಮ್ಮ ಬೆಂಬಲಕ್ಕೆ ಸದಾ ನಿಲ್ಲುತ್ತದೆ ಪಿಂಕಲೂರು. ಮಹಿಳಾ ಜಾಗೃತಿ, ಎಚ್ಚರ, ಸ್ವರಕ್ಷಣೆ, ಚುರುಕುತನ ಇದರ ಧ್ಯೇಯ. ನೀವೂ ಬನ್ನಿ, ಪಿಂಕಲೂರಿನ ಜೊತೆ ಕೈಜೋಡಿಸಿ. ಉತ್ತಮ ಬೆಂಗಳೂರು, ಮಹಿಳಾ ಸುರಕ್ಷಿತ ಬೆಂಗಳೂರು ನಿರ್ಮಾಣಕ್ಕೆ ನೀವು ಸಹಕರಿಸಿ.
