ಫೆಬ್ರವರಿ 1ರಂದು ಮಂಡಿಸಲು ಉದ್ದೇಶಿಸಿರುವ ಕೇಂದ್ರ ಹಣಕಾಸು ಬಜೆಟನ್ನ ಮುಂದೂಡುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಮಾಡಿದೆ. ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ ಮುಂದೂಡುವಂತೆ ಕೋರಲಾಗಿತ್ತು. ಆದರೆ, ಬಜೆಟ್`ನಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

ನವದೆಹಲಿ(ಜ.23): ಫೆಬ್ರವರಿ 1ರಂದು ಮಂಡಿಸಲು ಉದ್ದೇಶಿಸಿರುವ ಕೇಂದ್ರ ಹಣಕಾಸು ಬಜೆಟನ್ನ ಮುಂದೂಡುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಮಾಡಿದೆ. ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ ಮುಂದೂಡುವಂತೆ ಕೋರಲಾಗಿತ್ತು. ಆದರೆ, ಬಜೆಟ್`ನಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಅಡ್ವೋಕೇಟ್ ಎಂ.ಎಲ್. ಶರ್ಮಾ ಸಲ್ಲಿಸಿದ್ದ ಪಿಐಎಲ್`ನಲ್ಲಿ 5 ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಯಾವುದೇ ಪರಿಹಾರ ಕಾರ್ಯಕ್ರಮಗಳನ್ನೂ ಘೋಷಿಸದಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಲು ಕೋರಲಾಗಿತ್ತು. ಪರಿಹಾರ ಕಾರ್ಯಕ್ರಮಗಳನ್ನ ಘೋಷಿಸಿದರೆ ಅದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ವಾದಿಸಲಾಗಿತ್ತು.