ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೆನ್ನೈ(ಅ.03): ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಕುರಿತಂತೆ ನಿಗೂಢತೆ ಮುಂದುವರೆದಿದೆ. ಜಯಲಲಿತಾ ಸೆಪ್ಸೀಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿದ್ದರೂ ಸ್ಪಷ್ಟತೆ ಮಾತ್ರ ಸಿಗುತ್ತಿಲ್ಲ. ಈ ಮಧ್ಯೆ, ಜಯಲಲಿತಾ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್`ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದೆ. ಆಸ್ಪತ್ರೆಯಲ್ಲೇ ಸಂಪುಟ ಸದಸ್ಯರು ಮತ್ತು ಅಧಿಕಾರಿಗಳ ಜೊತೆ ಜಯಲಲಿತಾ ನಡೆಸಿದ್ದಾರೆ ಎನ್ನಲಾದ ಸಭೆಯ ಫೋಟೋಗಳನ್ನ ಸಹ ರಿಲೀಸ್ ಮಾಡುವಂತೆ ಕೋರಲಾಗಿದೆ.

ಪಿಐಎಲ್ ಸಲ್ಲಿಸಿರುವ ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ, ರಾಜ್ಯದ ಜನ ಜಯಲಲಿತಾ ಆರೋಗ್ಯ ಸ್ಥಿತಿ ಬಗ್ಗೆ ಆತಂಕಗೊಂಡಿದ್ದು, ಅವರಿಗೆ ಮಾಹಿತಿ ನೀಡಬೇಕಿದೆ ಎಂದು ಕೋರಿದ್ದಾರೆ.