ಬೀದಿ ನಾಯಿಗಳು ದಾಳಿ ಮಾಡುವುದು ಸಾಮಾನ್ಯ ಆದರೆ ಆಂಧ್ರದಲ್ಲಿ ಬೀದಿ ಹಂದಿಗಳು ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿವೆ.

ಆಂಧ್ರಪ್ರದೇಶ(ಆ.19): ಬೀದಿ ನಾಯಿಗಳು ದಾಳಿ ಮಾಡುವುದು ಸಾಮಾನ್ಯ ಆದರೆ ಆಂಧ್ರದಲ್ಲಿ ಬೀದಿ ಹಂದಿಗಳು ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿವೆ.

ನೆಲ್ಲೂರು ಜಿಲ್ಲೆಯ ಕಾವಲಿ ಪಟ್ಟಣದಲ್ಲಿ ಇಂತಹುದ್ದೊಂದು ಭಯಾನಕ ಘಟನೆ ನಡೆದಿದೆ. ಪಾದಚಾರಿ ಮಹಿಳೆ ಮೇಲೆ ಏಕಾಏಕಿ ಹಂದಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ. ಎಷ್ಟೇ ಕೂಗಿಕೊಂಡರು ಹಂದಿಗಳು ಬೆದರಲಿಲ್ಲ. ಕೊನೆಗೆ ಚೀರಾಟ ಕೇಳಿ ಸ್ಥಳಕ್ಕೆ ಬಂದ ಯುವಕರು ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಸದ್ಯ ಈ ಘಟನೆಯ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದ್ದು, ನೋಡುಗರೆಲ್ಲರೂ ಹಂದಿಗಳ ದಾಳಿ ನೋಡಿ ಬೆಚ್ಚಿ ಬಿದ್ದಿದ್ದಾರೆ.