55 ವರ್ಷಗಳ ಬಳಿಕ ಭೌತಶಾಸ್ತ್ರ ನೊಬೆಲ್‌ಗೆ ಭಾಜನರಾದ ಮಹಿಳೆ ಡೊನ್ನಾ ಅವರಾಗಿದ್ದಾರೆ. 10903ಲ್ಲಿ ಮೇರಿ ಕ್ಯೂರಿ ಅವರಿಗೆ ಮೊದಲು ಭೌತಶಾಸ್ತ್ರ ನೊಬೆಲ್ ಸಿಕ್ಕಿತ್ತು. 1963ರಲ್ಲಿ ಮಾರಿಯಾ ಗೋಯೆಪ್ಪೋರ್ಟ್- ಮೇಯರ್ ಅವರಿಗೆ ಸಂದಿತ್ತು.
ಸ್ಟಾಕ್‌ಹೋಮ್ (ಸ್ವೀಡನ್): ನೇತ್ರ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಸರಳ ಹಾಗೂ ನಿಖರವಾಗಿಸಿದ ಲೇಸರ್ ಉಪಕರಣಗಳನ್ನು ಸಂಶೋಧಿಸಿದ ಮೂವರು ವಿಜ್ಞಾನಿಗಳಿಗೆ 2018ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಗೌರವ ಲಭಿಸಿದೆ.
ಅಮೆರಿಕದ ಆರ್ಥರ್ ಅಶ್ಕಿನ್ (96), ಫ್ರಾನ್ಸ್‌ನ ಗೆರಾರ್ಡ್ ಮೌರು (76) ಹಾಗೂ ಕೆನಡಾದ ಡೊನ್ನಾ ಸ್ಟ್ರಿಕ್‌ಲ್ಯಾಂಡ್ ಅವರು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. 7.41 ಕೋಟಿ ರು. ನಗದು ಬಹುಮಾನದ ಪೈಕಿ ಅರ್ಧ ಮೊತ್ತ ಅಶ್ಕಿನ್ ಅವರಿಗೆ ಸಿಗಲಿದ್ದರೆ, ಉಳಿದ ಅರ್ಧ ಮೊತ್ತವನ್ನು ಮೌರು ಹಾಗೂ ಡೊನ್ನಾ ಹಂಚಿಕೊಳ್ಳಲಿದ್ದಾರೆ.
ವೈದ್ಯರಿಗೆ ನೊಬೆಲ್ ಪ್ರಶಸ್ತಿ
ಇದೇ ವೇಳೆ ಆರ್ಥರ್ ಅಶ್ಕಿನ್, ನೊಬೆಲ್ ಪುರಸ್ಕಾರಕ್ಕೆ ಪಾತ್ರರಾದ ಅತ್ಯಂತ ಹಿರಿಯ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಇನ್ನು 55 ವರ್ಷಗಳ ಬಳಿಕ ಭೌತಶಾಸ್ತ್ರ ನೊಬೆಲ್‌ಗೆ ಭಾಜನರಾದ ಮಹಿಳೆ ಡೊನ್ನಾ ಅವರಾಗಿದ್ದಾರೆ. 10903ಲ್ಲಿ ಮೇರಿ ಕ್ಯೂರಿ ಅವರಿಗೆ ಮೊದಲು ಭೌತಶಾಸ್ತ್ರ ನೊಬೆಲ್ ಸಿಕ್ಕಿತ್ತು. 1963ರಲ್ಲಿ ಮಾರಿಯಾ ಗೋಯೆಪ್ಪೋರ್ಟ್- ಮೇಯರ್ ಅವರಿಗೆ ಸಂದಿತ್ತು.
ಸಂಶೋಧನೆ ಏನು?
ಲೇಸರ್ ಉಪಕರಣದ ಬೆರಳುಗಳ ಸಹಾಯದಿಂದ ಕಣಗಳು, ಅಣುಗಳು, ವೈರಾಣುಗಳು ಹಾಗೂ ಇನ್ನಿತರೆ ಸಜೀವ ಜೀವಕೋಶಗಳನ್ನು ಹಿಡಿದುಕೊಳ್ಳುವ ಕಡ್ಡಿಯೊಂದನ್ನು ಅಶ್ಕಿನ್ ಅವರು ಕಂಡುಹಿಡಿದಿದ್ದರು. ಮೌರು ಹಾಗೂ ಸ್ಟ್ರಿಕ್‌ಲ್ಯಾಂಡ್ ವರಿಬ್ಬರೂ ಸೇರಿ ಆಪ್ಟಿಕಲ್ ಪಲ್ಸ್‌ಗಳನ್ನು ಅಭಿವೃದ್ಧಿಪಡಿಸಿದ್ದರು. ಇದು ಮನುಕುಲ ಕಂಡುಹಿಡಿದ ಅತ್ಯಂತ ಚಿಕ್ಕ ಹಾಗೂ ಅಧಿಕ ತೀವ್ರತೆಯ ಲೇಸರ್ ಪಲ್ಸ್ ಆಗಿತ್ತು.
