ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಮತ್ತು ಅವರ ಪತ್ನಿ ಕಸಾಯಿಖಾನೆ ಒಳಗೆ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಮತ್ತು ಅವರ ಪತ್ನಿ ಕಸಾಯಿಖಾನೆ ಒಳಗೆ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಫೋಟೋದಲ್ಲಿ ಕಪಿಲ್‌ ಸಿಬಲ್‌ ಮಾಂಸದ ತುಂಡುಗಳನ್ನು ಕೈಯಲ್ಲಿ ಹಿಡಿದು ನಿಂತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿನಿತ್‌ ಅಗರ್ವಾಲ್‌ ಎಂಬುವವರು ಫೇಸ್‌ಬುಕ್‌ನಲ್ಲಿ ಈ ಫೋಟೋವನ್ನು ಪೋಸ್ಟ್‌ ಮಾಡಿ, ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಮತ್ತು ಅವರ ಪತ್ನಿ ಪ್ರಮಿಳಾ ಮುನ್ನಡೆಸುತ್ತಿರುವ ಏಷ್ಯಾದ ಅತಿದೊಡ್ಡ ಕಸಾಯಿಖಾನೆ ಇದು. ಇದನ್ನೂ ಫೇಕ್‌ ಎನ್ನಬೇಡಿ’ ಎಂದು ಒಕ್ಕಣೆ ಬರೆಯಲಾಗಿದೆ. ಇದು 7500 ಬಾರಿ ಶೇರ್‌ ಆಗಿದೆ.

ಆದರೆ ಈ ಸುದ್ದಿ ನಿಜವೇ ಎಂದು ಇಂಡಿಯಾ ಟುಡೇ ಆ್ಯಂಟಿ ಫೇಕ್‌ ನ್ಯೂಸ್‌ ವಾರ್‌ ರೂಮ್‌ ಪರಿಶೀಲಿಸಿದಾಗ ಈ ಫೋಟೋ ಹಿಂದಿನ ವಾಸ್ತವ ಬಯಲಾಗಿ, ಇದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ವೈರಲ್‌ ಆಗಿರುವ ಚಿತ್ರದ ಮೂಲ ಫೋಟೋ 2007ರಲ್ಲಿ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಪ್ರಕಟವಾಗಿದೆ.

ಅದರಲ್ಲಿ ಕಪಿಲ್‌ ಸಿಬಲ್‌ ಅವರ ಜಾಗದಲ್ಲಿ ಫ್ರೆಂಚ್‌ ಮಹಿಳೆ ಸ್ಟೀಫೈನ್‌ ಗಾರ್ಬರ್‌ ಅವರು ನಿಂತಿದ್ದಾರೆ. ಈ ಫೋಟೋ ಬಳಸಿಕೊಂಡು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ. ವಾಸ್ತವವಾಗಿ 2014ರಿಂದಲೂ ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

- ವೈರಲ್ ಚೆಕ್