20 ಸಾವಿರ ಕೋಟಿ ರು. ಸಾಲದ ಸುಳಿಗೆ ಸಿಲುಕಿರುವ ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ‘ಜಿಯೋನಿ’ ದಿವಾಳಿ ಕೋರಿ ಅರ್ಜಿ ಸಲ್ಲಿಸಿದೆ. 

ಬೀಜಿಂಗ್‌: ಸುಮಾರು 20 ಸಾವಿರ ಕೋಟಿ ರು. ಸಾಲದ ಸುಳಿಗೆ ಸಿಲುಕಿರುವ ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ‘ಜಿಯೋನಿ’ ದಿವಾಳಿ ಕೋರಿ ಅರ್ಜಿ ಸಲ್ಲಿಸಿದೆ. 

Add Asianetnews Kannada as a Preferred SourcegooglePreferred

ತನ್ನ ವಿರುದ್ಧ ಹಾಕ್ಸಿಂಗ್‌ ಬ್ಯಾಂಕ್‌ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ತನ್ನನ್ನು ದಿವಾಳಿ ಎಂದು ಪರಿಗಣಿಸುವಂತೆ ಕೋರಿ ಜಿಯೋನಿ ಸಲ್ಲಿಸಿದ ಅರ್ಜಿಯನ್ನು ಶೆನ್ಜೆನ್‌ ಮೂಲದ ಕೋರ್ಟ್‌ ಮಾನ್ಯ ಮಾಡಿದೆ. 

ದಿವಾಳಿ ಕೋರಿದ ಜಿಯೋನಿ ಕಂಪನಿಯನ್ನು ಮರು ಸಂಘಟಿಸಲು ನ್ಯಾಯಾಲಯ ಆದೇಶಿಸಬಹುದಾಗಿದೆ. ಜಿಯೋನಿ ಕಂಪನಿಯ ಮುಖ್ಯಸ್ಥ ಲಿಯು ಲಿರಾಂಗ್‌ ಅವರು ಕಂಪನಿಯ ಹಣವನ್ನು ಜೂಜಿಗೆ ಇಟ್ಟು ಅಂದಾಜು 10000 ಕೋಟಿ ರು.ನಷ್ಟಅನುಭವಿಸಿದ್ದಾರೆ.