ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ರೈಲ್ವೆ ಹಳಿ, ರೈಲಿಗೆ ತಲೆಕೊಟ್ಟು ಪಿಎಚ್‌ಡಿ ವಿದ್ಯಾರ್ಥಿನಿ ಶ್ರೀದೇವಿ (31) ತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಲಬುರಗಿ (ಏ.15): ಒಂದು ಕಡೆ ಪ್ರಿಯಕರ ಮಾಡಿರುವ ಮೋಸ, ನ್ನೊಂದೆಡೆ ಗೈಡ್ ಕೊಡುತ್ತಿರುವ ಕಿರುಕುಳ​ ತಾಳಲಾರದೇ ಪಿಎಚ್’ಡಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ರೈಲ್ವೆ ಹಳಿ, ರೈಲಿಗೆ ತಲೆಕೊಟ್ಟು ಪಿಎಚ್‌ಡಿ ವಿದ್ಯಾರ್ಥಿನಿ ಶ್ರೀದೇವಿ (31) ತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಲಬುರಗಿ ವಿವಿ ಅರ್ಥಶಾಸ್ತ್ರ ವಿಭಾಗದಲ್ಲಿ ಪಿಎಚ್‌’ಡಿ ಮಾಡುತ್ತಿರುವ ಶ್ರೀದೇವಿ ಆತ್ಮಹತ್ಯೆ ಮಾಡುವ ಮುಂಚೆ ಡೆತ್’ನೋಟ್ ಬರೆದಿಟ್ಟಿದ್ದು, ತಿಪ್ಪಣ್ಣ ಕಲ್ಮನಿ ಎಂಬ ಯುವಕ ಮೋಸ ಮಾಡಿರುವುದಾಗಿ ಹಾಗೂ ಪಿಎಚ್’ಡಿ ಗೈಡ್ ಡಾ.ಸಿದ್ದಪ್ಪ ವಿರುದ್ಧ ಹಣಕ್ಕಾಗಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದಾಳೆ. ಮೌಖಿಕ ಪರೀಕ್ಷೆಗೆ ಡಾ.ಸಿದ್ದಪ್ಪ ಆಕೆಯ ಬಳಿ ಹಣದ ಬೇಡಿಕೆ ಇಟ್ಟಿದ್ದಾರೆಂದು ಡೆತ್​ನೋಟ್’ನಲ್ಲಿ​ ಬರೆಯಲಾಗಿದೆ.

(ಸಾಂದರ್ಭಿಕ ಚಿತ್ರ)