ಬೆಂಗಳೂರು(ಸೆ.17): ಪಿಜಿ ಖಾಲಿ ಮಾಡಿಸೋ ವಿಚಾರವಾಗಿ ನಡೆದ ಗಲಾಟೆ ಅತಿರೇಕಕ್ಕೆ ಹೋಗಿ ಇಬ್ಬರು ಸಾಂಬರ್ ಎರಚಿಕೊಂಡು ಆಸ್ಪತ್ರೆ ಸೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

Add Asianetnews Kannada as a Preferred SourcegooglePreferred

ವಾರ್ಡನ್ ಮಗ ಸುಹಾಸ್ ಹಾಗೂ ಮನೆ ಮಾಲೀಕ ಶಿವರಾಮ್ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಹನುಮಂತನಗರದಲ್ಲಿ ರೇಖಾ ಹಾಗೂ ಶಿವರಾಮ್ ದಂಪತಿ ಪಿಜಿ ನಡೆಸುತ್ತಿದ್ದರು. ಆದರೆ ಲಾಸ್ ಆಗಿದ್ದರಿಂದ ಹೇಮಲತಾ ಎಂಬುವರಿಗೆ ಪಿಜಿ ನಡೆಸುವಂತೆ ಕಾಂಟ್ರಾಕ್ಟ್ ನೀಡಿದ್ದರು. 

ಇನ್ನು ಹೇಮಲತಾ ಪಿಜಿ ನೋಡಿಕೊಳ್ತಿದ್ದಂತೆ ವಿದ್ಯಾರ್ಥಿಗಳು ಬರೋದಿಕ್ಕೆ ಶುರುಮಾಡಿದ್ದು ಬ್ಯುಸಿನೆಸ್​ ಚೆನ್ನಾಗಿ ನಡೀತಾ ಇತ್ತು. ಇದನ್ನು ತಿಳಿದ ರೇಖಾ, ಶಿವರಾಮ್ ದಂಪತಿ ಕಿರಿಕ್ ತೆಗೆದು ಪಿಜಿ ಖಾಲಿ ಮಾಡುವಂತೆ ಗಲಾಟೆ ತೆಗೆದಿದ್ದಾರೆ ಅನ್ನೋದು ಹೇಮಲತಾ ಆರೋಪ. 

ಆದರೆ ಬಾಡಿಗೆ ಹಣ ನೀಡದೇ ಹೇಮಲತಾ ಕಿರಿಕ್ ಮಾಡಿದ್ದಾರೆ ಅನ್ನೋದು ಮನೆ ಮಾಲೀಕರ ಆರೋಪ. ಇದೇ ವಿಚಾರಕ್ಕೆ ಮನೆ ಮಾಲೀಕರು ಹಾಗೂ ಪಿಜಿ ನೋಡಿಕೊಳ್ಳುತ್ತಿದ್ದ ಹೇಮಲತಾ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಹೇಮಲತಾ ಸಾಂಬರ್ ಎರಚಿದ್ದಾಳೆ ಅಂತ ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.