Asianet Suvarna News Asianet Suvarna News

ಪ್ರಶ್ನೆ ಪತ್ರಿಕೆ ವಿಳಂಬ: ಪಿಜಿ ಸಿಇಟಿ, ಡಿಸಿಇಟಿ ಪರೀಕ್ಷೆ ಮುಂದೂಡಿಕೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ‘ಪಿಜಿ ಸಿಇಟಿ’ ಮತ್ತು ಡಿಸಿಇಟಿ ಪರೀಕ್ಷೆಗಳನ್ನು ಒಂದು ವಾರದ ಮಟ್ಟಿಗೆ ಮುಂದೂಡಿದೆ.

PG CET DCET Exam postponed by Karnataka Exam Board
Author
Bengaluru, First Published Jul 9, 2019, 8:42 AM IST

ಬೆಂಗಳೂರು (ಜು.09) : ಪ್ರಶ್ನೆಪತ್ರಿಕೆ ಮುದ್ರಣ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ‘ಪಿಜಿ ಸಿಇಟಿ’ ಮತ್ತು ಡಿಸಿಇಟಿ ಪರೀಕ್ಷೆಗಳನ್ನು ಒಂದು ವಾರದ ಮಟ್ಟಿಗೆ ಮುಂದೂಡಿದೆ. ಪ್ರಶ್ನೆಪತ್ರಿಕೆ ಮುದ್ರಣದಿಂದಲೇ ಪರೀಕ್ಷೆ ಮುಂದೂಡ ಲಾಗಿದೆ ಎಂದು ಪರೀಕ್ಷಾ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಈ ಸಂಬಂಧ ಸೋಮವಾರ ಕೆಇಎ ನೂತನ ವೇಳಾಪಟ್ಟಿ ಪ್ರಕಟಿಸಿದೆ. 

2019 ನೇ ಸಾಲಿನ ಎಂಬಿಎ, ಎಂಸಿಎ, ಎಂಇ, ಎಂಟೆಕ್, ಎಂ.ಆರ್ಕ ಕೋರ್ಸ್‌ಗಳ ಪ್ರವೇಶಾತಿಗೆ ಜು. 13 ಮತ್ತು 14ರಂದು ನಡೆಯಬೇಕಿದ್ದ ಪಿಜಿಸಿಇಟಿ ಪರೀಕ್ಷೆಯನ್ನು ಜು.20  ಮತ್ತು 21 ರಂದು ನಡೆಸಲು ನಿರ್ಧರಿಸಿದೆ. ಎಂಇ, ಎಂ.ಟೆಕ್‌ಗಳಿಗೆ ಜು. 20 ರಂದು ಮತ್ತು ಎಂಸಿಎ, ಎಂಬಿಎ ಕೋರ್ಸ್‌ಗಳಿಗೆ ಜು. 21 ರಂದು ಬೆಳಗ್ಗೆ 10. 30 ರಿಂದ 12. 30 ರ ವರೆಗೆ ಹಾಗೂ ಮಧ್ಯಾಹ್ನ 2.30ರಿಂದ 4.30ರವರೆಗೆ ಪರೀಕ್ಷೆಗಳು ನಡೆಯಲಿವೆ. ಎರಡನೇ ವರ್ಷದ ಮೂರನೇ ಸೆಮಿಸ್ಟರ್ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಜು.14 ರಂದು ನಡೆಯಬೇಕಿದ್ದ ಡಿಸಿಇಟಿ ಪರೀಕ್ಷೆಯನ್ನು ಜು. 21 ಕ್ಕೆ ಮುಂದೂಡಲಾಗಿದೆ. 

ಜು. 21ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಮಧ್ಯಾಹ್ನ 3 ರಿಂದ 4 ಗಂಟೆವರೆಗೆ ಪರೀಕ್ಷೆ ನಡೆಯಲಿದೆ. ನೂತನ ವೇಳಾಪಟ್ಟಿಯ ಪ್ರವೇಶ ಪತ್ರವನ್ನು ಜು.11 ರಿಂದ ಪ್ರಾಧಿಕಾರದ ವೆಬ್ ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ  http://kea.kar.nic.in ಭೇಟಿ ನೀಡಬಹುದು ಎಂದು ತಿಳಿಸಿದೆ.

Follow Us:
Download App:
  • android
  • ios