ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಅತಿರೇಕಿ ಮುಸ್ಲಿಂ ಸಂಘಟನೆಯನ್ನ ನಿಷೇಧಿಸಬೇಕು ಅನ್ನೋ ಒತ್ತಾಯ ಹಲವು ವರ್ಷಗಳಿಂದಲೂ ಕೇಳಿ ಬರುತ್ತಲೇ ಇದೆ. ಭಯೋತ್ಪಾದನೆ, ಲವ್ ಜಿಹಾದ್​ನಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಈ ಸಂಘಟನೆಯನ್ನ ನಿಷೇಧಿಸಬೇಕು ಎಂದು ರಾಷ್ಟ್ರೀಯ ತನಿಖಾದಳ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಇಂತಹ ಸಂಘಟನೆ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸುತ್ತಿದೆ. ‘ನಮಗೂ ಹೇಳಲಿಕ್ಕಿದೆ’ ಎಂಬ ಹೆಸರಿನಲ್ಲಿ ನಡೆಸುತ್ತಿರುವ ಸಮಾವೇಶದ ವೇದಿಕೆಗೆ ಇತ್ತೀಚೆಗೆ ಹತ್ಯೆಯಾದ ಪರ್ತಕರ್ತೆ ಗೌರಿ ಲಂಕೇಶ್ ಹೆಸರಿಡಲಾಗಿದೆ.

ಬೆಂಗಳೂರು (ಅ.15): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಅತಿರೇಕಿ ಮುಸ್ಲಿಂ ಸಂಘಟನೆಯನ್ನ ನಿಷೇಧಿಸಬೇಕು ಅನ್ನೋ ಒತ್ತಾಯ ಹಲವು ವರ್ಷಗಳಿಂದಲೂ ಕೇಳಿ ಬರುತ್ತಲೇ ಇದೆ. ಭಯೋತ್ಪಾದನೆ, ಲವ್ ಜಿಹಾದ್​ನಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಈ ಸಂಘಟನೆಯನ್ನ ನಿಷೇಧಿಸಬೇಕು ಎಂದು ರಾಷ್ಟ್ರೀಯ ತನಿಖಾದಳ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಇಂತಹ ಸಂಘಟನೆ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸುತ್ತಿದೆ. ‘ನಮಗೂ ಹೇಳಲಿಕ್ಕಿದೆ’ ಎಂಬ ಹೆಸರಿನಲ್ಲಿ ನಡೆಸುತ್ತಿರುವ ಸಮಾವೇಶದ ವೇದಿಕೆಗೆ ಇತ್ತೀಚೆಗೆ ಹತ್ಯೆಯಾದ ಪರ್ತಕರ್ತೆ ಗೌರಿ ಲಂಕೇಶ್ ಹೆಸರಿಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂಲಭೂತವಾದಿ ಸಂಘಟನೆ ಅನ್ನೋ ಹೆಸರು ಅಂಟಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ತಾನು ಪ್ರಗತಿಪರ ಎಂದು ಬಿಂಬಿಸಿಕೊಳ್ಳಲು ಗೌರಿ ಲಂಕೇಶ್ ಹೆಸರನ್ನು ಸಂಘಟನೆ ಬಳಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಇನ್ನೂ ಸಮಾವೇಶದಲ್ಲಿ ಪಿಎಫ್ಐ ಮುಖಂಡರು ಪಿಎಫ್ಐ ರಾಜ್ಯಾಧ್ಯಕ್ಷ ಮೊಹಮ್ಮದ್ ಶಾಕೀರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಕೆಮ್ಮಾರ್, ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್, ಯೋಗೀಶ ಮಾಸ್ಟರ್, ಜ್ಞಾನಪ್ರಕಾಶ್ ಸ್ವಾಮೀಜಿ, ಸಿರಿಮನೆ ನಾಗರಾಜ್, ನಗರಕೆರೆ ರಮೇಶ್ ಸೇರಿ ಇತರರು ಭಾಗಿಯಾಗಿದ್ದಾರೆ.