ಪಿಎಫ್‌ ಬಡ್ಡಿದರ ಶೇ. 8.55ಕ್ಕೆ ಇಳಿಕೆ: 5 ವರ್ಷದಲ್ಲೇ ಕನಿಷ್ಠ

PF Interest Rate: EPFO cuts interest rate to 8.55%
Highlights

ನೌಕರರ ಭವಿಷ್ಯನಿಧಿಯ ಮೇಲಿನ ಬಡ್ಡಿ ದರವನ್ನು ಸರ್ಕಾರ 2017-​18ನೇ ಸಾಲಿನಲ್ಲಿ ಶೇ. 8.55ಕ್ಕೆ ಇಳಿಕೆ ಮಾಡಿದೆ. ಇದು ಕಳೆದ 5 ವರ್ಷದಲ್ಲೇ ಕನಿಷ್ಠ ಬಡ್ಡಿದರ ಎನಿಸಿಕೊಂಡಿದೆ. 
 

ನವದೆಹಲಿ: ನೌಕರರ ಭವಿಷ್ಯನಿಧಿಯ ಮೇಲಿನ ಬಡ್ಡಿ ದರವನ್ನು ಸರ್ಕಾರ 2017-​18ನೇ ಸಾಲಿನಲ್ಲಿ ಶೇ. 8.55ಕ್ಕೆ ಇಳಿಕೆ ಮಾಡಿದೆ. ಇದು ಕಳೆದ 5 ವರ್ಷದಲ್ಲೇ ಕನಿಷ್ಠ ಬಡ್ಡಿದರ ಎನಿಸಿಕೊಂಡಿದೆ. 

2016​-17ನೇ ಸಾಲಿನಲ್ಲಿ 8.65ರ ಬಡ್ಡಿದರವನ್ನು ನಿಗದಿ ಮಾಡಲಾಗಿತ್ತು. 2018ರ ಫೆಬ್ರವರಿಯಲ್ಲಿ ನಡೆದ ಇಪಿಎಫ್‌ಒ ಮುಖ್ಯಸ್ಥರ ಸಭೆಯಲ್ಲಿ ಭವಿಷ್ಯ ನಿಧಿಯ ಬಡ್ಡಿದರವನ್ನು 8.55ಕ್ಕೆ ನಿಗದಿಗೊಳಿಸಿ ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿತ್ತು. 

ಆದರೆ, ಕರ್ನಾಟಕ ಚುನಾವಣೆ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ.

loader