ಪೆಟ್ರೋಲಿಯಂ ಡೀಲರ್ಗಳಿಗೆ ನೀಡಬೇಕಾದ ಸವಲತ್ತುಗಳನ್ನು ನೀಡದೆ, ಡೀಲರ್ಗಳ ಪಾಲು ಆದಾಯ ಪರಿಷ್ಕರಣೆ ಕೂಡ ಮಾಡದ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಪೆಟ್ರೋಲಿಯಂ ವಿತರಕರು ದೇಶಾದ್ಯಂತ ಮೂರು ಹಂತದಲ್ಲಿ ಮುಷ್ಕರ ನಡೆಸಲಿದ್ದಾರೆ. ಮೊದಲ ಹಂತವಾಗಿ ಅ.19, 26ರಂದು ರಾತ್ರಿ 7ರಿಂದ 7.15ರವರೆಗೆ 15 ನಿಮಿಷ ಕಾಲ ಬ್ಲ್ಯಾಕ್ ಔಟ್ ಮಾಡಿ ಗ್ರಾಹಕರಿಗೆ ಅನನುಕೂಲವಾಗದಂತೆ ಸಾಂಕೇತಿಕ ಮುಷ್ಕರ ನಡೆಸಲಾಗುವುದು. ಆ ಹೊತ್ತಿನಲ್ಲಿ ಪೆಟ್ರೋಲ್, ಡೀಸೆಲ್ ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ಪೆಟ್ರೋಲಿಯಂ ಡೀಲರ್'ಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಂಗಳೂರು(ಅ.25): ಪೆಟ್ರೋಲಿಯಂ ಡೀಲರ್ಗಳಿಗೆ ನೀಡಬೇಕಾದ ಸವಲತ್ತುಗಳನ್ನು ನೀಡದೆ, ಡೀಲರ್ಗಳ ಪಾಲು ಆದಾಯ ಪರಿಷ್ಕರಣೆ ಕೂಡ ಮಾಡದ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಪೆಟ್ರೋಲಿಯಂ ವಿತರಕರು ದೇಶಾದ್ಯಂತ ಮೂರು ಹಂತದಲ್ಲಿ ಮುಷ್ಕರ ನಡೆಸಲಿದ್ದಾರೆ.
ಮೊದಲ ಹಂತವಾಗಿ ಅ.19, 26ರಂದು ರಾತ್ರಿ 7ರಿಂದ 7.15ರವರೆಗೆ 15 ನಿಮಿಷ ಕಾಲ ಬ್ಲ್ಯಾಕ್ ಔಟ್ ಮಾಡಿ ಗ್ರಾಹಕರಿಗೆ ಅನನುಕೂಲವಾಗದಂತೆ ಸಾಂಕೇತಿಕ ಮುಷ್ಕರ ನಡೆಸಲಾಗುವುದು. ಆ ಹೊತ್ತಿನಲ್ಲಿ ಪೆಟ್ರೋಲ್, ಡೀಸೆಲ್ ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ಪೆಟ್ರೋಲಿಯಂ ಡೀಲರ್'ಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದ್ವಿತೀಯ ಹಂತವಾಗಿ ನವೆಂಬರ್ 3ರಂದು ಪೆಟ್ರೋಲಿಯಂ ಉತ್ಪನ್ನಗಳನ್ನು ಪೆಟ್ರೋಲಿಯಂ ಕಂಪನಿಗಳಿಂದ ಖರೀದಿ ಮಾಡಲಾಗುವುದಿಲ್ಲ. ತೃತೀಯ ಹಂತವಾಗಿ ನವೆಂಬರ್ 15ರಂದು ‘ಖರೀದಿಯೂ ಇಲ್ಲ, ಮಾರಾಟವೂ ಇಲ್ಲ’ ಎಂಬ ವಿಧಾನ ಮೂಲಕ ಪ್ರತಿಭಟಿಸಲಾಗುವುದು ಎಂದರು.
ಇಥೆನಾಲ್ ಬ್ಲೆಂಡ್ ಆಗುತ್ತಿಲ್ಲ
ಹಿಂದೆ ಪೆಟ್ರೋಲ್ಗೆ ಶೇ.5 ಇಥೆನಾಲ್ ಮಿಶ್ರಗೊಳಿಸುತ್ತಿದ್ದು, ಇದೀಗ ಅದನ್ನು ಶೇ.10ಕ್ಕೆ ಏರಿಸಲಾಗಿದೆ. ಇದನ್ನು ನೀಡುವಾಗ ಸರಿಯಾಗಿ ಮಿಶ್ರಣ ಮಾಡದೆ ನೀಡುವುದರಿಂದ ಅದನ್ನು ಹಾಕುವ ವಾಹನದ ಇಂಜಿನ್ಗಳಲ್ಲಿ ಸಮಸ್ಯೆ ಬರುತ್ತಿದೆ. ಇಥೆನಾಲ್ ಮಿಶ್ರಣ ಮಾಡುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು. ಇದರಿಂದ ವಿದೇಶಿ ವಿನಿಮಯ ಉಳಿಸಬಹುದು. ಆದರೆ ನೀಡುವಾಗಲೇ ಸರಿಯಾಗಿ ಇಥೆನಾಲ್ ಬ್ಲೆಂಡ್ ಮಾಡಿ ನೀಡಬೇಕು ಎಂದು ಹೇಳಿದರು. ಸಂಘದ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ವಿ.ಶೆಣೈ, ದ.ಕ ಉಡುಪಿ ಪೆಟ್ರೋಲಿಯಂ ವಿತರಕರ ಸಂಘದ ಅಧ್ಯಕ್ಷ ಆನಂದ ಕಾರ್ನಾಡ್ ಸುದ್ದಿಗೋಷ್ಠಿಯಲ್ಲಿದ್ದರು.
ಅಪೂರ್ವ ಚಂದ್ರ ಸಮಿತಿ ವರದಿ
ಪೆಟ್ರೋಲಿಯಂ ಡೀಲರ್ಗಳ ಕುಂದುಕೊರತೆ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ಸರ್ಕಾರ ರಚಿಸಿದ್ದ ಅಪೂರ್ವ ಚಂದ್ರ ಸಮಿತಿ ಈಗಾಗಲೇ ವರದಿ ನೀಡಿದೆ. ಅದರಂತೆ ಪ್ರತಿ 6 ತಿಂಗಳಿಗೊಮ್ಮೆ ಡೀಲರ್ಗಳ ಪಾಲು ಮೊತ್ತ ಪರಿಷ್ಕರಿಸಬೇಕಿದೆ. ಇದನ್ನು ಸರ್ಕಾರ ಮಾಡುತ್ತಿಲ್ಲ. ಆದರೆ 15 ದಿನಗಳಿಗೊಮ್ಮೆ ಜಾಗತಿಕ ಕಚ್ಚಾತೈಲ ಬೆಲೆ ಆಧರಿಸಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ವ್ಯತ್ಯಾಸವಾಗುತ್ತಿದೆ. ಪೆಟ್ರೋಲಿಯಂ ವಿತರಕರಿಗೆ ವಿದ್ಯುತ್ ವ್ಯತ್ಯಾಸದಿಂದ ಆಗುವ ಜನರೇಟರ್ ವೆಚ್ಚ, ಕಾರ್ವಿುಕರ ಖರ್ಚಿನ ಒಂದು ಪಾಲು ನೀಡಬೇಕು ಎಂಬ ಶಿಫಾರಸನ್ನೂ ಪರಿಗಣಿಸಿಲ್ಲ. ಇವೆಲ್ಲವನ್ನೂ ಮುಂದಿಟ್ಟು ಪ್ರತಿಭಟನೆ ಮಾಡಲಾಗುತ್ತಿದೆ
