Asianet Suvarna News Asianet Suvarna News

ಬಂಕ್'ಗಳಲ್ಲಿ ದುಡ್ಡು ಕೊಟ್ಟರೆ ಮಾತ್ರ ಪೆಟ್ರೋಲ್: ಕಾರ್ಡ್ ಸ್ವೀಕರಿಸಲ್ಲ

ಜನವರಿ 9 ರಿಂದ ಅಂದರೆ ನಾಳೆ ಬೆಳಗ್ಗೆಯಿಂದ ಸರ್ ಚಾರ್ಜ್ ವಿಧಿಸುವುದಾಗಿ ಹೇಳಲಾಗಿದೆ

Petrol Pumps Wont Accept Cards Of Some Banks Starting Midnight

ರಾಜ್ಯಾದ್ಯಂತ ಪೆಟ್ರೋಲ್ ಬಂಕ್'ಗಳಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್'ಗಳನ್ನು ಸ್ವೀಕರಿಸದಿರಲು ಪೆಟ್ರೋಲ್ ಬಂಕ್ ಮಾಲೀಕರು ನಿರ್ಧರಿಸಿದ್ದಾರೆ.

ಕ್ಯಾಶ್ ಲೆಸ್ ವ್ಯವಹಾರಕ್ಕೆ ಸೆಡ್ಡು ಹೊಡೆದಿರುವ ಬಂಕ್ ಮಾಲೀಕರು ಇಂದು ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆಯನ್ನು ಸ್ಥಗಿತಗೊಳಿಸಲಿದ್ದಾರೆ. ಬ್ಯಾಂಕ್‍ಗಳು ಬಂಕ್ ಮಾಲೀಕರಿಗೆ ಶೇ.1 ರಷ್ಟು ಸರ್ ಚಾರ್ಜ್ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಪೆಟ್ರೋಲ್ ಬಂಕ್‍ಗಳಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್‍ಗಳನ್ನು ಬಳಕೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ರಾಜ್ಯ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್ ರವೀಂದ್ರನಾಥ್ ಹೇಳಿದ್ದಾರೆ.

ಜನವರಿ 9 ರಿಂದ ಅಂದರೆ ನಾಳೆ ಬೆಳಗ್ಗೆಯಿಂದ ಸರ್ ಚಾರ್ಜ್ ವಿಧಿಸುವುದಾಗಿ ಹೇಳಲಾಗಿದೆ. ಹಾಗಾಗಿ ಇಂದು ಮಧ್ಯರಾತ್ರಿಯಿಂದಲೇ ಕಾರ್ಡ್‍ಗಳ ಬಳಕೆ ಇಲ್ಲ. ಪ್ರಧಾನಿ ಮೋದಿ ಕ್ಯಾಶ್‍ಲೆಸ್ ವ್ಯವಹಾರ ಮಾಡಿ ಅಂತಾ ಹೇಳ್ತಾರೆ. ಪೆಟ್ರೋಲ್ ಬಂಕ್‍ಗಳಲ್ಲಿ ಶೇ.90 ರಷ್ಟು ಕಾರ್ಡ್ ಬಳಕೆ ಮಾಡಲಾಗುತ್ತಿದೆ. ಇದರಿಂದ ಹೇಗೆ ವ್ಯವಹಾರ ಮಾಡೋದು ಅಂತ ರವೀಂದ್ರ ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios