ಗುಜರಾತ್ ವಿಧಾನಸಭೆಗೆ ಚುನಾವಣೆಗಳು ಸಮೀಸುತ್ತಿದ್ದಂತೆ, ಅಖಾಡ ರಂಗೇರತೊಡಗಿದೆ. ಇಂದು ದಯಾದ್ರದಲ್ಲಿ  ಚುನಾವಣಾ ಸಭೆಯನ್ನುದ್ದೇಶಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ದಯಾದ್ರಾ, ಗುಜರಾತ್: ಗುಜರಾತ್ ವಿಧಾನಸಭೆಗೆ ಚುನಾವಣೆಗಳು ಸಮೀಸುತ್ತಿದ್ದಂತೆ, ಅಖಾಡ ರಂಗೇರತೊಡಗಿದೆ. ಇಂದು ದಯಾದ್ರದಲ್ಲಿ ಚುನಾವಣಾ ಸಭೆಯನ್ನುದ್ದೇಶಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಪೆಟ್ರೋಲ್ ದರವು ಎಲ್ಲಾ ಕಡೆ ಕೆಳಗಿಳಿಯುತ್ತಿದೆ, ಆದರೆ ಭಾರತದಲ್ಲಿ ಮಾತ್ರ ಹೆಚ್ಚಾಗುತ್ತಿದೆ ಎಂದಿರುವ ರಾಹುಲ್ ಗಾಂಧಿ, ಕೇಂದ್ರದ ತಪ್ಪು ಆರ್ಥಿಕ ನೀತಿಗಳೇ ಕಾರಣವೆಂದಿದ್ದಾರೆ.

ಜಿಎಸ್ಟಿಯನ್ನು ಜಾರಿಗೊಳಿಸಿರುವ ವಿಧಾನವನ್ನು ಟೀಕಿಸಿದ ಕಾಂಗ್ರೆಸ್ ಉಪಾಧ್ಯಕ್ಷ, ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರರುತ್ತಿವೆ, ಇತರ ಎಲ್ಲಾ ಕಡೆ ಪೆಟ್ರೋಲ್ ದರಗಳು ಕಡಿಮೆಯಾಗುತ್ತಿವೆ ಆದರೆ ಭಾರತದಲ್ಲಿ ಮಾತ್ರ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ಡಿಸೆಂಬರ್’ನಲ್ಲಿ ಗುಜರಾತ್ ವಿಧಾನಸಭೆಗೆ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ.