Asianet Suvarna News Asianet Suvarna News

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ: ಜೊತೆಗೆ ತೈಲ ಬಳಕೆಯ ಬೆಂಗಳೂರಿಗರಿಗೆ ಮತ್ತೊಂದು ಶಾಕ್

ಬೆಂಗಳೂರು ನಾಗರಿಕರಿಗೆ ಸಣ್ಣ ಶಾಕಿಂಗ್ ನ್ಯೂಸ್

Petrol price hiked by Rs 1 per litre diesel up by Rs 1

ದೆಹಲಿ(ಏ.16): ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಹಿನ್ನಲೆಯಲ್ಲಿ  ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಲೀಟರ್ ಪೆಟ್ರೋಲ್​ ದರ 1.39 ರೂ. ಹಾಗೂ ಡೀಸೆಲ್​​ ದರ 1.04 ರೂ.ಗೆ ಏರಿಕೆಯಾಗಿದೆ.
ಬೆಂಗಳೂರು ನಾಗರಿಕರಿಗೆ ಸಣ್ಣ ಶಾಕಿಂಗ್ ನ್ಯೂಸ್. ದೇಶದಲ್ಲಿ ಅತೀ ಹೆಚ್ಚು ಪೆಟ್ರೋಲ್ ಬಳಸುವ ನಗರಗಳಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ  ಸಿಲಿಕಾನ್ ಸಿಟಿ ನಾಗರಿಕರು 2016-17 ವರ್ಷದಲ್ಲಿ 84.3 ಕೋಟಿ ಲೀಟರ್ ಪೆಟ್ರೋಲ್ ಬಳಸಿದ್ದಾರೆ.
ಮೊದಲಸ್ಥಾನ ದೆಹಲಿ ಪಡೆದುಕೊಂಡಿದ್ದು 126.6 ಕೋಟಿ ಲೀಟರ್ ಉಪಯೋಗಿಸಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್  ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ತಿಳಿಸಿದೆ.  ಡೀಸೆಲ್ ಬಳಕೆಯಲ್ಲಿ  ಉದ್ಯಾನನಗರಿ ಮೂರನೆ ಸ್ಥಾನದಲ್ಲಿದೆ(115.7 ಕೋಟಿ ಲೀಟರ್). ಮೊದಲೆರಡು ಸ್ಥಾನದಲ್ಲಿ  ದೆಹಲಿ ಮುಂಬೈ ನಗರಗಳಿವೆ.  

Follow Us:
Download App:
  • android
  • ios