ಮುಂಬೈ(ಸೆ.16): ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ದರವನ್ನು ಅಲ್ಪಪ್ರಮಾಣದಲ್ಲಿ ಏರಿಕೆ ಮಾಡಿವೆ, ಡೀಸೆಲ್ ದರದಲ್ಲಿ ಕೊಂಚ ಬದಲಾವಣೆಯಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿ ಲೀಟರ್ ಪೆಟ್ರೋಲ್ ಬೆಲೆ 58 ಪೈಸೆ ಏರಿಕೆಯಾಗಿದೆ. ಪ್ರತಿ ಲೀಟರ್ ಡೀಸೆಲ್ ಬೆಲೆ 31 ಪೈಸೆ ಇಳಿಕೆಯಾಗಿದೆ. ಕಳೆದ ಆಗಸ್ಟ್ 31ರಂದು ಪೆಟ್ರೋಲ್ ಪ್ರತಿ ಲೀಟರ್ ಗೆ 3.38 ರೂ. ಹಾಗೂ ಡೀಸೆಲ್ ಪ್ರತಿ ಲೀಟರ್ 2.67 ರೂ. ಏರಿಕೆ ಮಾಡಲಾಗಿತ್ತು. 

ಇದಕ್ಕೂ ಮುನ್ನ ಆಗಸ್ಟ್ 15 ರಂದು ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಕಡಿತ ಮಾಡಲಾಗಿತ್ತು. ಲೀಟರ್ ಪೆಟ್ರೋಲ್ ಗೆ ಒಂದು ರೂ. ಕಡಿತ ಮಾಡಿದ್ದರೆ, ಡಿಸೇಲ್ ದರವನ್ನು 2 ರೂ. ಕಡಿಮೆ ಮಾಡಲಾಗಿತ್ತು.