ಮೂರನೇ ದಿನವೂ ಇಳಿಕೆ ಕಂಡ ತೈಲ ಬೆಲೆ..!

First Published 1, Jun 2018, 5:22 PM IST
Petrol price cut by 6 paise, diesel by 5 paise
Highlights

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಸತತ ಮೂರನೇ ದಿನವೂ ಇಳಿಕೆ ಕಾಣುತ್ತಿದ್ದು, ಇಂದು ಪೆಟ್ರೋಲ್ ಬೆಲೆ 6 ಪೈಸೆ ಮತ್ತು ಡಿಸೇಲ್ ಬೆಲೆ 5 ಪೈಸೆ ಕಡಿತ ಮಾಡಲಾಗಿದೆ.

ನವದೆಹಲಿ(ಜೂ.1): ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಸತತ ಮೂರನೇ ದಿನವೂ ಇಳಿಕೆ ಕಾಣುತ್ತಿದ್ದು, ಇಂದು ಪೆಟ್ರೋಲ್ ಬೆಲೆ 6 ಪೈಸೆ ಮತ್ತು ಡಿಸೇಲ್ ಬೆಲೆ 5 ಪೈಸೆ ಕಡಿತ ಮಾಡಲಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಕಂಡ ಪರಿಣಾಮ ಬೆಲೆ ಇಳಿಕೆ ಮಾಡಲಾಗಿದೆ ಎಂದು ತೈಲ ಕಂಪನಿಗಳು ತಿಳಿಸಿವೆ. ಅದರಂತೆ ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 78.29 ರೂ. ಮತ್ತು ಡಿಸೇಲ್ ಬೆಲೆ 69.20 ರೂ. ಆಗಿದೆ. ದೇಶದ ಇತರ ಮಹಾನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ತೈಲ ಬೆಲೆ ಕಡಿಮೆ ಇದೆ.

ಸತತ 16 ದಿನಗಳ ಏರಿಕೆ ನಂತರ ಕಳೆದ ಮೂರು ದಿನಗಳಿಂದ ತೈಲ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಕಾಣುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. 

loader