ಪೆಟ್ರೋಲ್ ಖರೀದಿ ಹಾಗೂ ಬಂಕ್ ತೆರೆಯುವುದು ಅಯಾ ಬಂಕ್ ಡೀಲರ್'ಗಳ ವಿವೇಚನೆಗೆ ಬೀಡಲಾಗಿದೆ. ಮಧ್ಯರಾತ್ರಿ ಹೊಸ ದರಗಳನ್ನು ನಿಗದಿಪಡಿಸಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಡೀಲರ್'ಗಳು ಆಕ್ಷೇಪಿಸಿವೆ.ಈ ನಿಯಮ ಜಾರಿಯಿಂದ ಪೆಟ್ರೋಲ್ ಪಂಪ್'ಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕಾಗುತ್ತದೆ ಎಂಬುದು ಡೀಲರ್'ಗಳ ಆಕ್ಷೇಪವಾಗಿದೆ.
ಬೆಂಗಳೂರು(ಜೂನ್ 15): ನಿತ್ಯ ಪೆಟ್ರೋಲ್. ಡೀಸೆಲ್ ಬೆಲೆ ಪರಿಷ್ಕರಣೆ ಯೋಜನೆ ಜಾರಿಯನ್ನು ವಿರೋಧಿಸಿ ಪೆಟ್ರೋಲ್ ಬಂಕ್ ಡೀಲರ್'ಗಳು ನಾಳೆ ಒಂದು ದಿನ ಖರೀದಿ ಮಾಡದಿರಲು ನಿರ್ಧರಿಸಿದೆ. ಬೆಂಗಳೂರಿನ ಪೆಟ್ರೋಲ್ ಬಂಕ್ ಡೀಲರ್'ಗಳು ನಾಳೆ ಪೆಟ್ರೋಲ್ ಖರೀದಿ ಮಾಡುವುದಿಲ್ಲ. ತಮ್ಮಲ್ಲಿ ಸಂಗ್ರಹವಾಗಿರುವಷ್ಟು ತೈಲವನ್ನು ಮಾತ್ರ ಗ್ರಾಹಕರಿಗೆ ಮಾರಾಟ ಮಾಡಲಿವೆ. ಕೇಂದ್ರ ಸರ್ಕಾರದ ಜತೆಗಿನ ಮುಂದಿನ ಸುತ್ತಿನ ಮಾತುಕತೆಯ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ.
ಇನ್ನು ಪೆಟ್ರೋಲ್ ಖರೀದಿ ಹಾಗೂ ಬಂಕ್ ತೆರೆಯುವುದು ಅಯಾ ಬಂಕ್ ಡೀಲರ್'ಗಳ ವಿವೇಚನೆಗೆ ಬೀಡಲಾಗಿದೆ. ಮಧ್ಯರಾತ್ರಿ ಹೊಸ ದರಗಳನ್ನು ನಿಗದಿಪಡಿಸಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಡೀಲರ್'ಗಳು ಆಕ್ಷೇಪಿಸಿವೆ.ಈ ನಿಯಮ ಜಾರಿಯಿಂದ ಪೆಟ್ರೋಲ್ ಪಂಪ್'ಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕಾಗುತ್ತದೆ ಎಂಬುದು ಡೀಲರ್'ಗಳ ಆಕ್ಷೇಪವಾಗಿದೆ.
ಒಂದು ದಿನದ ಮಟ್ಟಿಗೆ ಪೆಟ್ರೋಲ್ ಖರೀದಿಯೂ ಇಲ್ಲ, ಪೆಟ್ರೋಲ್ ಮಾರಾಟವೂ ಇಲ್ಲ ಎಂದು ಪೆಟ್ರೋಲ್ ಡೀಲರ್'ಗಳು ನಿನ್ನೆಯವರೆಗೂ ಹೇಳಿಕೊಂಡು ಬಂದಿದ್ದರು. ಇದೀಗ, ಪೆಟ್ರೋಲ್ ಸ್ಟಾಕ್ ಇರುವವರೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.
