ನಿರಂತರವಾಗಿ ತೈಲ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ವಾಹನ ಸವಾರರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಇದೀಗ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ.

ನವದೆಹಲಿ :  ಪೆಟ್ರೋಲ್, ಡೀಸೆಲ್ ಬೆಲೆಯ ನಿರಂತರ ಏರಿಕೆಯಿಂದ ಕಂಗೆಟ್ಟಿದ ಜನತೆಗೆ ಇದೀಗ ಗುಡ್ ನ್ಯೂಸ್ ಒಂದು ಇಲ್ಲಿದೆ. 

ದಿಲ್ಲಿಯಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಗ್ರಾಹಕರಿಗೆ ನಿರಾಳತೆ ಒದಗಿದೆ. 

ಪೆಟ್ರೋಲ್ ಬೆಲೆಯಲ್ಲಿ 0.21 ರು. ಇಳಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ 0.11ರು. ಇಳಿಕೆಯಾಗಿದೆ. 

ಇದರಿಂದ ಪೆಟ್ರೋಲ್ ಬೆಲೆ ಪ್ರತೀ ಲೀಟರ್ ಗೆ 82.62ರಷ್ಟಾಗಿದ್ದು, ಡೀಸೆಲ್ ಬೆಲೆ 75.58ರಷ್ಟಾಗಿದೆ. 

ಇನ್ನು ಮುಂಬೈನಲ್ಲಿ ಪೆಟ್ರೋಲ್ ಬೆಲೆ 88.08 ಹಾಗೂ ಡೀಸೆಲ್ ಬೆಲೆ 79.24ರು.ನಷ್ಟಿದೆ. 

ನಿರಂತರವಾಗಿ ಏರಿಕೆಯಿಂದ ತತ್ತರಿಸಿದ ರಾಜಧಾನಿ ಜನತೆಗೆ ಇದರಿಂದ ಕೊಂಚ ರಿಲಿಫ್ ದೊರಕಿದಂತಾಗಿದೆ. 

ಅಕ್ಟೋಬರ್ 4ರಂದು ಕೆಂದ್ರ ಸರ್ಕಾರವೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 2.50 ರು. ಇಳಿಕೆ ಮಾಡಿತ್ತು.