ನಾಳೆಯಿಂದ ಪೆಟ್ರೋಲ್, ಡೀಸೆಲ್ ಬೆಲೆಯು ಪ್ರತೀ ದಿನವೂ ಪರಿಷ್ಕರಣೆಯಾಗಲಿದೆ. ಇವತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಯವಾದರೆ ಮರುದಿನ ಬೆಳಗ್ಗೆ 6ಗಂಟೆಗೆ ಭಾರತದಲ್ಲಿ ಬೆಲೆ ಬದಲಾವಣೆಗೊಳ್ಳಲಿದೆ.
ನವದೆಹಲಿ(ಜೂನ್ 15): ಜಾಗತಿಕ ಕಚ್ಛಾ ತೈಲ ಬೆಲೆಯಲ್ಲಿ ಇಳಿಕೆಯಾದ ಕಾರಣ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಕಡಿಮೆಯಾಗಿದೆ. ಪೆಟ್ರೋಲ್ ಬೆಲೆ ಲೀಟರ್'ಗೆ 1.12 ರೂಪಾಯಿ ಇಳಿಕೆಯಾದರೆ, ಡೀಸೆಲ್ 1.24 ರೂ ಇಳಿದಿದೆ. ತೈಲ ಕಂಪನಿಗಳು ಇಂದು ಸಂಜೆ ಈ ನಿರ್ಧಾರ ಪ್ರಕಟಿಸಿವೆ. ನಾಳೆ ಶುಕ್ರವಾರ ನೂತನ ಬೆಲೆ ಜಾರಿಗೆ ಬರುತ್ತದೆ.
ನಾಳೆಯಿಂದ ಪೆಟ್ರೋಲ್, ಡೀಸೆಲ್ ಬೆಲೆಯು ಪ್ರತೀ ದಿನವೂ ಪರಿಷ್ಕರಣೆಯಾಗಲಿದೆ. ಇವತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಯವಾದರೆ ಮರುದಿನ ಬೆಳಗ್ಗೆ 6ಗಂಟೆಗೆ ಭಾರತದಲ್ಲಿ ಬೆಲೆ ಬದಲಾವಣೆಗೊಳ್ಳಲಿದೆ.
ಬೆಂಗಳೂರಿನಲ್ಲಿ ಸದ್ಯ ಪೆಟ್ರೋಲ್ ಬೆಲೆ ಲೀಟರ್'ಗೆ 71.59 ರೂಪಾಯಿ ಇದೆ. ಡೀಸೆಲ್ ಬೆಲೆ 59.76 ರೂ ಇದೆ. ನಾಳೆ ಹೊಸ ಬೆಲೆಗಳು ಅನ್ವಯವಾಗಲಿವೆ.