ಮಹಾತ್ಮಾ ಗಾಂಧೀಜಿ ಹತ್ಯೆ ನಡೆಯಬಹುದು ಎಂಬುದು ಅಮೆರಿಕ ಗೂಢಚರರಿಗೆ ಮೊದಲೇ ಗೊತ್ತಿತ್ತೇ? ಅವರು ಗಾಂಧೀಜಿಯವರ ಪ್ರಾಣ ರಕ್ಷಣೆಗೆ ಯತ್ನಿಸಿದ್ದರೇ? ಇಂಥ ಒಂದು ಪ್ರಶ್ನೆ ಈಗ ಎದುರಾಗಿದ್ದು, ಅಮೆರಿಕದಲ್ಲಿರುವ ಈ ಕುರಿತ ಟೆಲಿಗ್ರಾಂ ದಾಖಲೆಯೊಂದನ್ನು ಬಹಿರಂಗಪಡಿಸಬೇಕು. ಈ ಮೂಲಕ ಗಾಂಧೀಜಿ ಸಾವಿನ ಮರುತನಿಖೆ ನಡೆಸಬೇಕು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ನವದೆಹಲಿ: ಮಹಾತ್ಮಾ ಗಾಂಧೀಜಿ ಹತ್ಯೆ ನಡೆಯಬಹುದು ಎಂಬುದು ಅಮೆರಿಕ ಗೂಢಚರರಿಗೆ ಮೊದಲೇ ಗೊತ್ತಿತ್ತೇ? ಅವರು ಗಾಂಧೀಜಿಯವರ ಪ್ರಾಣ ರಕ್ಷಣೆಗೆ ಯತ್ನಿಸಿದ್ದರೇ? ಇಂಥ ಒಂದು ಪ್ರಶ್ನೆ ಈಗ ಎದುರಾಗಿದ್ದು, ಅಮೆರಿಕದಲ್ಲಿರುವ ಈ ಕುರಿತ ಟೆಲಿಗ್ರಾಂ ದಾಖಲೆಯೊಂದನ್ನು ಬಹಿರಂಗಪಡಿಸಬೇಕು. ಈ ಮೂಲಕ ಗಾಂಧೀಜಿ ಸಾವಿನ ಮರುತನಿಖೆ ನಡೆಸಬೇಕು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಮುಂಬೈನ ಅಭಿನವ ಭಾರತ ಎಂಬ ಸಂಸ್ಥೆಯ ಟ್ರಸ್ಟಿಯೂ ಆದ ಸಂಶೋಧಕ ಡಾ| ಪಂಕಜ್ ಫಡ್ನಿಸ್ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ಮಹಾತ್ಮಾ ಅವರ ಹತ್ಯೆ ನಡೆದ ಕೆಲವೇ ಹೊತ್ತಿನಲ್ಲಿ (1948, ಜ.30) ಅಮೆರಿಕ ಸರ್ಕಾರಕ್ಕೆ ದಿಲ್ಲಿಯಲ್ಲಿನ ಅಮೆರಿಕ ದೂತಾವಾಸದಿಂದ ಕೆಲವು ಟೆಲಿಗ್ರಾಂಗಳು ರವಾನೆಯಾಗಿವೆ. ಈ ಪೈಕಿ ಒಂದು ಟೆಲಿಗ್ರಾಂ ಅನ್ನು ಅಮೆರಿಕ ಗೌಪ್ಯವಾಗಿಟ್ಟಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಇದನ್ನು ಬಹಿರಂಗಪಡಿಸಬೇಕು ಎಂದು ಭಾರತ ಸರ್ಕಾರಕ್ಕೆ ಸೂಚಿಸುವಂತೆ ಡಾ| ಫಡ್ನಿಸ್ ಅವರು ಮನವಿ ಮಾಡಿದ್ದಾರೆ.