ಲಿಖಿತ ಸಂವಿಧಾನ ಇಲ್ಲದ ಕಾರಣ, ಪರ್ಯಾಯೋತ್ಸವ ಸಂದರ್ಭದಲ್ಲಿ ಗೊಂದಲವಾಗುತ್ತಿದೆ.ಇದರಿಂದ ಸಂಸ್ಥಾನಕ್ಕೆ ಅಪಚಾರವಾಗುತ್ತಿದೆ ಹಾಗಾಗಿ ಸಂಪ್ರದಾಯಗಳನ್ನು ಕ್ರೋಢಿಕರಿಸಿ ಲಿಖಿತ ಸಂವಿಧಾನ ರಚನೆಯಾಗಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

ಉಡುಪಿ (ಜ.30): ಉಡುಪಿಯ ಪೇಜಾವರ ಮಠಾಧೀಶರ ಸಹಿತ ಅಷ್ಟಮಠಾಧೀಶರ ವಿರುದ್ಧ ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.

ಅಷ್ಟಮಠಾಧೀಶರಲ್ಲಿ ಒಮ್ಮತ ಮೂಡಬೇಕು ಎಂಬ ಕಾರಣಕ್ಕೆ ಒಂದು ಲಿಖಿತ ಸಂವಿಧಾನ ತಯಾರಾಗಬೇಕು ಎಂದು ಈ ದಾವೆಯಲ್ಲಿ ಬೇಡಿಕೆ ಇರಿಸಲಾಗಿದೆ.

ವಿಶ್ವವಿಜಯ ಸ್ವಾಮಿಜಿ

ಪೇಜಾವರ ಮಠದ ಕಿರಿಯ ಮಠಾಧೀಶರಾಗಿದ್ದ ವಿಶ್ವ ವಿಜಯರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. 80ರ ದಶಕದಲ್ಲಿ ಇವರು ಸಾಗರೋಲ್ಲಂಘನ ಮಾಡಿ ಅಮೇರಿಕಾಗೆ ಹೋಗಿದ್ದರು ಎಂಬ ಕಾರಣಕ್ಕೆ ಪೀಠತ್ಯಾಗ ಮಾಡಬೇಕಾಗಿ ಬಂದಿತ್ತು.

ಲಿಖಿತ ಸಂವಿಧಾನ ಇಲ್ಲದ ಕಾರಣ, ಪರ್ಯಾಯೋತ್ಸವ ಸಂದರ್ಭದಲ್ಲಿ ಗೊಂದಲವಾಗುತ್ತಿದೆ.ಇದರಿಂದ ಸಂಸ್ಥಾನಕ್ಕೆ ಅಪಚಾರವಾಗುತ್ತಿದೆ ಹಾಗಾಗಿ ಸಂಪ್ರದಾಯಗಳನ್ನು ಕ್ರೋಢಿಕರಿಸಿ ಲಿಖಿತ ಸಂವಿಧಾನ ರಚನೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ವಿಶ್ವ ವಿಜಯರ ಪರವಾಗಿ ಮಂಗಳರಿನ ನ್ಯಾಯವಾದಿ ಕೆ.ಎಸ್.ಎನ್.ರಾಜೇಶ್ ದಾವೆ ಹೂಡಿದ್ದಾರೆ.