ಇತ್ತೀಚಿಗಷ್ಟೇ ಜರ್ಮನಿಯಲ್ಲಿ ಈ ಕಾಯ್ದೆ ಜಾರಿ ಆಗಿದ್ದು, ಅದೇ ಮಾದರಿಯಲ್ಲಿ ಭಾರತದಲ್ಲಿ ಕೂಡ ಸರ್ಕಾರಿ ಸಮಾರಂಭದಲ್ಲಿ ಮಾಂಸಾಹಾರದ ಎಲ್ಲಾ ಪದಾರ್ಥಾಗಳನ್ನು ನಿಷೇಧಿಸಬೇಕೆಂದು ಪೆಟಾ ಮನವಿ ಮಾಡಿದೆ.
ನವದೆಹಲಿ (ಏ. 25): ಸರ್ಕಾರಿ ಸಭೆ-ಸಮಾರಂಭದಲ್ಲಿ ಮಾಂಸಾಹಾರ ನಿಷೇಧಿಸಬೇಕೆಂದು ಪ್ರಾಣಿ ದಯಾ ಸಂಘಟನೆ ‘ಪೆಟಾ' ಪ್ರಧಾನಿ ಮೋದಿ ಬಳಿ ಇವತ್ತು ಮನವಿ ಮಾಡಿದೆ.
ಇತ್ತೀಚಿಗಷ್ಟೇ ಜರ್ಮನಿಯಲ್ಲಿ ಈ ಕಾಯ್ದೆ ಜಾರಿ ಆಗಿದ್ದು, ಅದೇ ಮಾದರಿಯಲ್ಲಿ ಭಾರತದಲ್ಲಿ ಕೂಡ ಸರ್ಕಾರಿ ಸಮಾರಂಭದಲ್ಲಿ ಮಾಂಸಾಹಾರದ ಎಲ್ಲಾ ಪದಾರ್ಥಾಗಳನ್ನು ನಿಷೇಧಿಸಬೇಕೆಂದು ಪೆಟಾ ಮನವಿ ಮಾಡಿದೆ.
ದೇಶದಲ್ಲಿ ಪ್ರಾಣಿಗಳ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ‘ಪೆಟಾ' ಈ ರೀತಿ ಮನವಿ ಮಾಡಿದೆ.
ಈ ಹಿಂದೆ ತಮಿಳುನಾಡಿನಲ್ಲಿ ಪ್ರಚಲಿತವಿರುವ ಜಲ್ಲಿಕಟ್ಟು ಕ್ರೀಡೆಯನ್ನು ಕೂಡಾ ನಿಷೇಧಿಸಬೇಕೆಂದು ಪೇಟಾ ಸಂಘಟನೆಯು ಆಗ್ರಹಿಸಿತ್ತು.