Asianet Suvarna News Asianet Suvarna News

ಹಳೆ ನೋಟು ಡೆಪಾಸಿಟ್'ಗೆ ಮತ್ತೆ ಕಾಲಾವಕಾಶ?: 'ಜನರ ಸಂಪತ್ತು ಕಸಿದುಕೊಳ್ಳುವುದು ಸರಿಯಲ್ಲ' ಕೇಂದ್ರಕ್ಕೆ ಸುಪ್ರೀಂ ಸವಾಲು

ನೋಟ್ ಬ್ಯಾನ್ ಘೋಷಣೆಯಿಂದ ತಮ್ಮ ಹಣವನ್ನು ಅಂತಿಮ ದಿನಾಂಕದ ಮೊದಲು ಡೆಪಾಸಿಟ್ ಮಾಡದಿರಲು ಸಾಧ್ಯವಾಗದ ಕುರಿತಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಆರ್'ಬಿಐ ಬಳಿ ಮಹತ್ವದ ಪ್ರಶ್ನೆ ಕೇಳಿದೆ. ನೋಟ್ ಬ್ಯಾನ್ ಸಂದರ್ಭದಲ್ಲಿ ಅಮಾನ್ಯಗೊಂಡ ನೋಟುಗಳನ್ನು ಡೆಪಾಸಿಟ್ ಮಾಡಲು ನೀಡಿದ ಅಂತಿಮ ದಿನಾಂಕದೊಳಗೆ ಹಣ ಜಮಾ ಮಾಡಲು ಸಾಧ್ಯವಾಗದಿರುವವರಿಗೆ ಮತ್ತೊಂದು ಅವಕಾಶ ಯಾಕೆ ನೀಡಬಾರದು? ಎಂದು ಸುಪ್ರೀಂ ಪ್ರಶ್ನಸಿದೆ.  

persons who had genuine money couldnt be denied a chance to deposit sc

ನವದೆಹಲಿ(ಜು.04): ನೋಟ್ ಬ್ಯಾನ್ ಘೋಷಣೆಯಿಂದ ತಮ್ಮ ಹಣವನ್ನು ಅಂತಿಮ ದಿನಾಂಕದ ಮೊದಲು ಡೆಪಾಸಿಟ್ ಮಾಡದಿರಲು ಸಾಧ್ಯವಾಗದ ಕುರಿತಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಆರ್'ಬಿಐ ಬಳಿ ಮಹತ್ವದ ಪ್ರಶ್ನೆ ಕೇಳಿದೆ. ನೋಟ್ ಬ್ಯಾನ್ ಸಂದರ್ಭದಲ್ಲಿ ಅಮಾನ್ಯಗೊಂಡ ನೋಟುಗಳನ್ನು ಡೆಪಾಸಿಟ್ ಮಾಡಲು ನೀಡಿದ ಅಂತಿಮ ದಿನಾಂಕದೊಳಗೆ ಹಣ ಜಮಾ ಮಾಡಲು ಸಾಧ್ಯವಾಗದಿರುವವರಿಗೆ ಮತ್ತೊಂದು ಅವಕಾಶ ಯಾಕೆ ನೀಡಬಾರದು? ಎಂದು ಸುಪ್ರೀಂ ಪ್ರಶ್ನಸಿದೆ.  

ನೈಜ ಕಾರಣಗಳಿಂದ ತಮ್ಮ ಹಣ ಬ್ಯಾಂಕ್'ಗೆ ಡೆಪಾಸಿಟ್ ಮಾಡಲು ಸಾಧ್ಯವಾಗದಿರುವವರ ಸಂಪತ್ತನ್ನು ಸರ್ಕಾರ ಈ ರೀತಿ ಕಸಿದುಕೊಳ್ಳುವುದು ಸರಿಯಲ್ಲ. ನೋಟ್ ಬ್ಯಾನ್ ಮಾಡುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಜೈಲಿನಲ್ಲಿದ್ದರೆ ಆತ ಹಣ ಡೆಪಾಸಿಟ್ ಹೇಗೆ ಮಾಡುವುದು ಎಂದಿರುವ ಸುಪ್ರೀಂ ನೈಜ ಕಾರಣವಿರುವವರಿಗೆ ಹಳೆ ನೋಟುಗಳನ್ನು ಜಮಾವಣೆ ಮಾಡಲು ಮತ್ತೊಂದು ಅವಕಾಶ ನೀಡಬೇಕು. ಹೀಗೆ ಮಾಡದಿದ್ದಲ್ಲಿ ಇದೊಂದು ಗಂಭೀರ ಪ್ರಕರಣವಾಗಲಿದೆ ಎಂದು ತಿಳಿಸಿದೆ.

ಈ ವಿಚಾರವಾಗಿ ಉತ್ತರಿಸಲು ಎರಡು ವಾರಗಳ ಅವಕಾಶ ಯಾಚಿಸಿರುವ ಕೇಂದ್ರ ಸರ್ಕಾರ 'ಕಾರಣಗಳನ್ನು ಆಲಿಸಿ ಡೆಪಾಸಿಟ್'ಗೆ ಅವಕಾಶ ನೀಡಬೇಕೋ ಬೇಡವೋ ಎಂಬುವುದನ್ನು ನಿರ್ಧರಿಸುವುದು RBI ಗೆ ಬಿಟ್ಟ ವಿಚಾರ' ಎಂದಿದೆ.

ಅಚ್ಚರಿಯ ವಿಚಾರವೆಂದರೆ ಮಹಿಳೆಯೊಬ್ಬಳ ಕೇಸ್ ವಿಚಾರಣೆ ಸಂದರ್ಭದಲ್ಲಿ ಈ ಸುಪ್ರೀಂ ಈ ಪ್ರಶ್ನೆ ಎತ್ತಿದೆ. ಮಹಿಳೆಯು ತಾನು ನೋಟ್ ಬ್ಯಾನ್ ಸಂದರ್ಭದಲ್ಲಿ ಡೆಲಿವರಿಯಾಗಿ ಆಸ್ಪತ್ರೆಯಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದೆ ಹೀಗಾಗಿ ನಿಗದಿಪಡಿಸಿದ ಅಂತಿಮ ದಿನಾಂಕದೊಳಗೆ ಹಣ ಜಮಾವಣೆ ಮಾಡಲು ಸಾಧ್ಯವಾಗಿರಲಿಲ್ಲ ಎಂದು ದೂರು ಸಲ್ಲಿಸಿದ್ದಳು.

Follow Us:
Download App:
  • android
  • ios