ಪಥಾರಿಯಾ (ಮೇ. 01): ರಫೇಲ್‌ ವಿಮಾನ ಖರೀದಿ ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಟೀಕಿಸುವ ಭರದಲ್ಲಿ ಸುಪ್ರೀಂಕೋರ್ಟ್‌ ತೀರ್ಪನ್ನು ತಪ್ಪಾಗಿ ಉಲ್ಲೇಖಿಸಿ ಸುಪ್ರೀಂನಿಂದ ಟೀಕೆಗೆ ಗುರಿಯಾದರೂ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ತಮ್ಮ ಚೌಕೀದಾರ್‌ ಚೋರ್‌ ಟೀಕಾಸ್ತ್ರ ನಿಲ್ಲಿಸುವುದು ಬಿಟ್ಟಿಲ್ಲ. ಬದಲಾಗಿ ಅದನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಮೋದಿ ವಿರುದ್ಧ ಕಣಕ್ಕೆ ಇಳಿಯದ್ದಕ್ಕೆ ಕಾರಣ ತಿಳಿಸಿದ ಪ್ರಿಯಾಂಕಾ

ಮಧ್ಯಪ್ರದೇಶದ ದಮೋಹ್‌ ಜಿಲ್ಲೆಯಲ್ಲಿ ಕಾಂಗ್ರೆಸ್‌ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌, ‘ದೆಹಲಿಯಲ್ಲಿನ ಪ್ರಧಾನಿ ಅಧಿಕೃತ ನಿವಾಸಕ್ಕೆ ಭದ್ರತೆ ಒದಗಿಸಲು ಗನ್‌ ಹಿಡಿದು ನಿಂತ ಸಿಆರ್‌ಪಿಎಫ್‌ ಮತ್ತು ಬಿಎಸ್‌ಎಫ್‌ ಭದ್ರತಾ ಸಿಬ್ಬಂದಿ ಬಳಿ ಹೋಗಿ ಚೌಕಿದಾರ್‌ ಎನ್ನಿ. ಆಗ ಅವರು ಚೋರ್‌ ಹೈ ಎಂದು ಹೇಳುತ್ತಾರೆ,’ ಎಂಂದು ವ್ಯಂಗ್ಯವಾಡಿದ್ದಾರೆ.