ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ಪ್ರಕರಣದಲ್ಲಿ ಇದೀಗ ಹೊಸ ಸುದ್ದಿಯೊಂದು ಹರಿದಾಡ್ತಿದೆ.

ಹರ್ಯಾಣ(ಸೆ.02): ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ಪ್ರಕರಣದಲ್ಲಿ ಇದೀಗ ಹೊಸ ಸುದ್ದಿಯೊಂದು ಹರಿದಾಡ್ತಿದೆ.

 ಸಿಬಿಐ ಕೋರ್ಟ್​ನಿಂದ 20 ವರ್ಷ ಜೈಲು ಶಿಕ್ಷೆ ಗೆ ಗುರಿಯಾಗಿ, ಕಂಬಿ ಎಣಿಸುತ್ತಿರುವ ಬಾಬಾ ನಕಲಿಯಂತೆ. ನಿಜವಾದ ಬಾಬಾ ರಾಮ್ ರಹೀಂ ವಿದೇಶದಲ್ಲಿ ಹಾಯಾಗಿದ್ದಾನೆ. ಜೈಲಿನಲ್ಲಿರುವ ಬಾಬಾನನ್ನು ತದ್ರೂಪಿ ಸೃಷ್ಟಿ ಮಾಡಿ ಜೈಲಿಗೆ ಕಳುಹಿಸಲಾಗಿದೆ ಅಂತ ಖಾಸಗಿ ಸುದ್ದಿ ವಾಹಿನಿಯ ಸಂಪಾದಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಂಪಾದಕ ಇಂದು ಸಂಜೆ 7 ಗಂಟೆಗೆ ಇದರ ರಹಸ್ಯ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಜೈಲಿನಲ್ಲಿರುವ ಬಾಬಾ ನಕಲಿಯೋ? ಅಥವಾ ಅಸಲಿಯೋ? ಎಂಬ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ.