ಕರೆಂಟ್ ವೈರ್ ಕದ್ದಿದ್ದಾನೆ ಎಂಬ ಆರೋಪದ ಮೇಲೆ ಯುವಕನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮಬಂಗಾಳ 20 ವರ್ಷದ ಬಶೀರ್ ಕೊಲೆಯಾದವ.
ಬೆಂಗಳೂರು(ಆ.22): ಕರೆಂಟ್ ವೈರ್ ಕದ್ದಿದ್ದಾನೆ ಎಂಬ ಆರೋಪದ ಮೇಲೆ ಯುವಕನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮಬಂಗಾಳ 20 ವರ್ಷದ ಬಶೀರ್ ಕೊಲೆಯಾದವ.
ಮೂರು ತಿಂಗಳ ಹಿಂದೆಯಷ್ಟೆ ಪಶ್ಚಿಮಬಂಗಾಳದಿಂದ ನಗರಕ್ಕೆ ಕೆಲಸಕ್ಕೆಂದು ಬಂದಿದ್ದ ಬಶೀರ್ ಹಾಗೂ ಕುಟುಂಬ ಮಾರತ್ ಹಳ್ಳಿ ಯ ವಾಗ್ದೇವಿ ಶಾಲೆ ಬಳಿ ವಾಸವಿತ್ತು. ಪೇಪರ್ ಹಾಯೋ ಕೆಲಸ ಮಾಡುತ್ತಿದ್ದ ಬಾಶೀರ್ ಕುಟುಂಬ ಬಸುರೆಡ್ಡಿ ಜಮೀನಿನಲ್ಲಿ ವಾಸವಿತ್ತು. ಜಮೀನಿನಲ್ಲಿ ಹಾದುಹೋಗಿದ್ದ ಕರೆಂಟ್ ವೈರ್ ಕದ್ದಿದ್ದಾನೆ ಎಂದು ಜಮೀನಿನ ಮಾಲೀಕ ಬಸುರೆಡ್ಡಿ ಮತ್ತು ಸ್ನೇಹಿತರು ಇಂದು ಬಶೀರ್ ನನ್ನು ರೂಮಿನೊಳಗೆ ಕೂಡಿ ಹಾಕಿ ಕರೆಂಟ್ ಶಾಕ್ ನೀಡಿ, ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆಂದು ಎಂಬುದು ಬಶೀರ್ ಕುಟುಂಬಸ್ಥರ ಆರೋಪ.
ಘಟನೆ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸ್ರು ಬಲೆ ಬೀಸಿದ್ದಾರೆ.
