Asianet Suvarna News Asianet Suvarna News

ಸಾಲ ಕೊಟ್ಟು ಮೀಟರ್ ಬಡ್ಡಿ ಕೇಳಿದ್ರು!: ಮೀಟರ್ ಬಡ್ಡಿಗೆ ನೋ ಅಂದಿದ್ಕಕ್ಕೆ ಆತನ ಮೇಲೆಯೇ ಹಲ್ಲೆ

ಕೊಟ್ಟ ಸಾಲ ಕೋಡುವುದು ತಡವಾಗಿದ್ದೇಕೆ ಆತನ ಮೇಲೆ ಆ ಗ್ಯಾಂಗ್​​ ಮಾರಣಾಂತಿಕ ಹಲ್ಲೆ ನಡೆಸಿದೆ. ಆರೋಪ ಹೊತ್ತು ಹಲ್ಲೆಗೊಳದವರು ಪೊಲೀಸ್​ ಠಾಣೆಯ ಮೆಟ್ಟಿಲೇರಿದರೆ ಪೊಲೀಸಪ್ಪ ಕ್ಯಾರೆ ಅಂತಿಲ್ಲ. ಬದಲಾಗಿ ಆರೋಪಿಗಳನ್ನು ಸ್ಟೇಷನ್​'ಗೆ ಕರೆಸಿಕೊಂಡು ರಾಜಮಾರ್ಯದೆ ಕೋಟ್ಟು ಕಳುಹಿಸಿದ್ದಾರೆ. ಆ ಪೊಲೀಸಪ್ಪ ನಾದರೂ ಯಾರು ಅಂತಿರಾ? ಈ ಸ್ಟೋರಿ ನೋಡಿ.

Person Beatebn By a Gang Woithout Any Mistake
  • Facebook
  • Twitter
  • Whatsapp

ಬೆಂಗಳೂರು(ಮೇ.24): ಕೊಟ್ಟ ಸಾಲ ಕೋಡುವುದು ತಡವಾಗಿದ್ದೇಕೆ ಆತನ ಮೇಲೆ ಆ ಗ್ಯಾಂಗ್​​ ಮಾರಣಾಂತಿಕ ಹಲ್ಲೆ ನಡೆಸಿದೆ. ಆರೋಪ ಹೊತ್ತು ಹಲ್ಲೆಗೊಳದವರು ಪೊಲೀಸ್​ ಠಾಣೆಯ ಮೆಟ್ಟಿಲೇರಿದರೆ ಪೊಲೀಸಪ್ಪ ಕ್ಯಾರೆ ಅಂತಿಲ್ಲ. ಬದಲಾಗಿ ಆರೋಪಿಗಳನ್ನು ಸ್ಟೇಷನ್​'ಗೆ ಕರೆಸಿಕೊಂಡು ರಾಜಮಾರ್ಯದೆ ಕೋಟ್ಟು ಕಳುಹಿಸಿದ್ದಾರೆ. ಆ ಪೊಲೀಸಪ್ಪ ನಾದರೂ ಯಾರು ಅಂತಿರಾ? ಈ ಸ್ಟೋರಿ ನೋಡಿ.

ಜೆ.ಪಿ.ನಗರ ಸ್ಟೇಷನ್ ಲಿಮಿಟ್ ನಿವಾಸಿ ಬಾಬು, ತಮ್ಮದೇ ಏರಿಯಾದ ಫೈನಾನ್ಸಿಯರ್​​ ಕಿಶೋರ್​​ ಬಳಿ 6 ಲಕ್ಷದ 50 ಸಾವಿರ ರೂಪಾಯಿ ಸಾಲ ಪಡೆದಿದ್ದಾನೆ. ಸಾಲ ಹಿಂತಿರುಗಿಸಲು ತಡವಾಗಿದ್ದಕ್ಕೆ  ಮೀಟರ್​​ ಬಡ್ಡಿ ಸೇರಿಸಿ 13 ಲಕ್ಷ  ಕೊಡುವಂತೆ ಕಿಶೋರ್ ಒತ್ತಡ ಹಾಕಿದ್ದಾನೆ. ಆದ್ರೆ, ಬಾಬು 4 ಲಕ್ಷದ 40 ಸಾವ್ರ ರೂಪಾಯಿ ಹಿಂತಿರುಗಿಸಿದ್ದಾನೆ. ಉಳಿದ ಹಣ ಹಿಂತಿರುಗಿಸಲು ಸ್ವಲ್ಪ ಸಮಯ ಕೇಳಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ​​ಕಿಶೋರ್​​, ಮತ್ತವನ ತಂಡ ಬಾಬುವನ್ನು ಕಿಡ್ನಾಪ್​ ಮಾಡಿ ರೂಮೊಂದರಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಬಾಬು ಜೆ.ಪಿ.ನಗರ ಪೊಲೀಸರಿಗೆ ದೂರು ನೀಡಿದ್ದರೂ ಯಾವ್ದೇ ಪ್ರಯೋಜನ ಆಗಿಲ್ಲ. ಯಾಕೆಂದರೆ ಜೆ.ಪಿ.ನಗರ ಪೊಲೀಸರೆಲ್ಲಾ ಕಿಶೋರ್ ಮತ್ತವನ ತಂಡದ ಆಪ್ತರೇ. ಹೀಗಾಗಿ, ಕಿಶೋರ್​ ಮತ್ತು ಸಹಚರರ ವಿರುದ್ಧ FIR ದಾಖಲಿಸಿಲ್ಲ. ಇದಾದ ಬಳಿಕ ಮೇಲೆ ತನ್ನ ಸ್ನೇಹಿತನ ಮೂಲಕ ಬಾಬುಗೆ ಕಾಲ್ ಮಾಡಿಸಿ ಕಿಶೋರ್ ಕೊಲೆ ಬೆದರಿಕೆ ಹಾಕಿದ್ದಾನೆ.

ಒಟ್ಟಿನಲ್ಲಿ  ಅನ್ಯಾಯ ಮಾಡಿದವರ ವಿರುದ್ಧ ಜೆ.ಪಿ. ನಗರ ಇನ್ಸ್​ಪೆಕ್ಟರ್​​ ಸಂಜೀವ್​​ ಕುಮಾರ್​ ಮಹಾಜನ್​​ ಯಾವುದೇ ದೂರು ದಾಖಲಿಸಿಕೊಳ್ಳದಿರುವುದು ಅನುಮಾನ ಮೂಡಿಸಿದೆ. ಇವಾಗ ಬೆಂಗಳೂರು ಕಮಿಷನರ್​​ ಪ್ರವೀಣ್ ಸೂದ್​ ಮೀಟರ್ ಬಡ್ಡಿಕೋ ಕಿಶೋರ್​​ ಮೇಲೆ  ಯಾವ ರೀತಿಯ ಕ್ರಮ ಕೈಗೊಳ್ತಾರೆ ಎನ್ನುವುದೇ ಕುತೂಹಲ.

Follow Us:
Download App:
  • android
  • ios