ಬೆಳಗಿನ ಜಾವ ಕನಕಪುರ ತಾಲೂಕಿನ‌ ತಟ್ಟೆಕೆರೆ ಬಳಿ ಮರಳು ಅಡ್ಡೆಗಳ ಮೇಲೆ ತಹಸೀಲ್ದಾರ್ ದಾಳಿ ನಡೆಸಿದ್ದರು.
ರಾಮನಗರ(ಮಾ.01): ಜೆಸಿಬಿ ಮೂಲಕ ತಹಶೀಲ್ದಾರ್ ಕೊಲೆಗೆ ಮರಳು ಮಾಫಿಯ ಯತ್ನ ನಡೆಸಿದ ಘಟನೆ ರಾಮನಗರ ಜಿಲ್ಲೆ ಕನಕಪುರದಲ್ಲಿ ನಡೆದಿದೆ.
ಮರಳು ಮಾಫಿಯಾ ವಿರುದ್ದ ಕನಕಪುರ ತಹಶೀಲ್ದಾರ್ ಯೋಗಾನಂದ್ ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ಮರಳು ಮಾಫಿಯಾದವರು ಯೋಗಾನಂದ್ ಚಲಿಸುತ್ತಿದ್ದ ಜೀಪ್ ಮೇಲೆ ಜೆಸಿಬಿ ಯಿಂದ ದಾಳಿ ನಡೆಸಿದ್ದಾರೆ. ಬೆಳಗಿನ ಜಾವ ಕನಕಪುರ ತಾಲೂಕಿನ ತಟ್ಟೆಕೆರೆ ಬಳಿ ಮರಳು ಅಡ್ಡೆಗಳ ಮೇಲೆ ತಹಸೀಲ್ದಾರ್ ದಾಳಿ ನಡೆಸಿದ್ದರು. ಈ ವೇಳೆ ತಹಸೀಲ್ದಾರ್ ಕೊಲೆಗೆ ಯತ್ನ ನಡೆದಿದೆ. ಸದ್ಯ ತಹಸೀಲ್ದಾರ್ ಸೇರಿ ಇತರೆ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ..
