ಕೆರೂರ: ಋತುಚಕ್ರದ ಹೊಟ್ಟೆ ನೋವು ತಾಳಲಾರದೇ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ನಡೆದಿದೆ.

ಬಡಾವಣೆಯ ವಿಜಯಲಕ್ಷ್ಮೀ ಚಿದಾನಂದ ಧಾರವಾಡ(15) ನೇಣಿಗೆ ಶರಣಾದವಳು. ಮೃತಳ ತಾಯಿ ಹೇಮಾವತಿ ಕೊಟ್ಟ ದೂರಿನನ್ವಯ ಎಎಸ್‌ಐ ಎಚ್.ಎಂ. ಹೊಸಮನಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ವಿಜಯಲಕ್ಷ್ಮೀ 9ನೇ ತರಗತಿಯಲ್ಲಿ ಓದುತ್ತಿದ್ದು, ಋತು ಚಕ್ರದ ಸಮಯದಲ್ಲಿ ಬರುವ ಹೊಟ್ಟೆನೋವು ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ತಿಳಿದುಬಂದಿದೆ.