ಚಿತ್ರದುರ್ಗದ ಬಳಿಕ ದಾವಣಗೆರೆಯಲ್ಲಿ ಕಾಡಾನೆಗಳ ರಾದ್ಧಾಂತ ಹೆಚ್ಚಾಗಿದೆ. ಇಲ್ಲಿನ ಅಶೋಕ್ ನಗರ ಕ್ಯಾಂಪ್ಗೆ ನುಗ್ಗಿದ ಗಜಪಡೆಗಳಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.
ದಾವಣಗೆರೆ(ಡಿ.8): ಚಿತ್ರದುರ್ಗದ ಬಳಿಕ ದಾವಣಗೆರೆಯಲ್ಲಿ ಕಾಡಾನೆಗಳ ರಾದ್ಧಾಂತ ಹೆಚ್ಚಾಗಿದೆ. ಇಲ್ಲಿನ ಅಶೋಕ್ ನಗರ ಕ್ಯಾಂಪ್ಗೆ ನುಗ್ಗಿದ ಗಜಪಡೆಗಳಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.
ಕ್ಯಾಂಪ್’ಗೆ ನುಗ್ಗಿದ ಕಾಡಾನೆಗಳು ಒಂದು ಕರುವನ್ನು ಬಲಿ ಪಡೆದಿದ್ದು, ಹಲವು ಬೈಕ್ ಗಳನ್ನು ಜಖಂಗೊಳಿಸಿವೆ. ಅಲ್ಲದೇ ಇಲ್ಲಿನ ತ್ಯಾವಣಿಗಿ ಪ್ರದೇಶದ ಸುತ್ತಮುತ್ತಲ ಗ್ರಾಮಗಳಲ್ಲಿ ಭಯಭೀತ ವಾತವರಣ ನಿರ್ಮಾಣವಾಗಿದೆ.
ಆನೆಗಳ ಹಾವಳಿಯಿಂದ ಜನರು ಆತಂಕಗೊಂಡಿದ್ದಾರೆ. ಸದ್ಯ ಕಾಡಾನೆಗಳು ನವಿಲೇಹಾಳ್ ಭಾಗದಲ್ಲಿ ಬೀಡುಬಿಟ್ಟಿವೆ.
