ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಸೀಕ್ರೇಟ್ ಒಂದನ್ನು ಜಮೀರ್ ಅಹಮದ್ ಹೇಳಿದ್ದಾರೆ. 

ಮಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಿಸಿದರೂ ಜನರು ಅವರನ್ನು ಸುಮ್ಮನೆ ಕೂರಲು ಬಿಡಲ್ಲ. ಹೀಗಾಗಿ ಅವರು ನಿರ್ಧಾರ ಬದಲಿಸಲಿದ್ದಾರೆ ಎಂದು ಆಹಾರ, ಹಜ್‌ ಮತ್ತು ವಕ್ಫ್ ಸಚಿವ ಜಮೀರ್‌ ಅಹ್ಮದ್‌ ಹೇಳಿದ್ದಾರೆ. ಇದಕ್ಕೆ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ರಾಜಕೀಯ ಜೀವನವನ್ನು ಉದಾಹರಣೆಯಾಗಿ ನೀಡಿದ್ದಾರೆ. 

ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಮಂಗಳೂರಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣಿಗಳನ್ನು ಅಭಿಮಾನಿಗಳು ಅಷ್ಟುಸುಲಭವಾಗಿ ರಾಜಕೀಯದಿಂದ ನಿವೃತ್ತಿಯಾಗಲು ಬಿಡುವುದಿಲ್ಲ. ಈ ಹಿಂದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕೂಡ ರಾಜಕೀಯ ನಿವೃತ್ತಿ ಘೋಷಿಸಿದ್ದರು. 

ಅವರೀಗಲೂ ಸಕ್ರಿಯ ರಾಜಕೀಯದಲ್ಲೇ ಇದ್ದಾರೆ. ಅಲ್ಲದೆ ಸಿದ್ದರಾಮಯ್ಯ ರಾಜಕಾರಣದಲ್ಲಿ ಇರಬೇಕಾದ ಅಗತ್ಯ ಇದೆ. ದೇವೇಗೌಡರಂತೆ ಸಿದ್ದರಾಮಯ್ಯ ಕೂಡ ನಿರ್ಧಾರ ಬದಲಿಸಲಿದ್ದಾರೆ ಎಂದರು.