ನವದೆಹಲಿ(ನ.22): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿತ್ತು. ಆರ್ಥಿಕತೆ ಪಾತಾಳಕ್ಕೆ ಕುಸಿದಿತ್ತು. ಇದೀಗ ಲಾಕ್‌ಡೌನ್ ತೆರವಾಗಿದ್ದರೂ, ಕೊರೋನಾ ಕಾರಣ ಹಲವು ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ(ವರ್ಕ್ ಫ್ರಮ್ ಹೋಮ್) ಅವಕಾಶ ನೀಡಿದೆ. ಈ ಮೂಲಕ ಕೊರೋನಾದಿಂದ ದೂರವಿರುವ ಅವಕಾಶವನ್ನು ಒದಗಿಸಿಕೊಟ್ಟಿದೆ. ಇದು ಹಲವರಿಗೆ ಖುಷಿ ನೀಡಿದ್ದರೆ, ಇನ್ನೂ ಕೆಲವರಿಗೆ ಕಿರಿ ಕಿರಿ ತಂದಿದೆ. ಇದೀಗ ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಸರ್ಕಾರ ಶಾಕ್ ನೀಡಲು ತಯಾರಿ ನಡೆಸುತ್ತಿದೆ.

Work from home ಮಾಡುತ್ತಿದ್ದೀರಾ? ಹ್ಯಾಕರ್ಸ್ ಬಗ್ಗೆ ಇರಲಿ ಎಚ್ಚರ.

ಟ್ರಾಫಿಕ್ ಕಿರಿಕಿರಿ  ಸೇರಿದಂತೆ ಹಲವು ಕಾರಣಗಳಿಂದ ಹೆಚ್ಚಿನವರು ಮನೆಯಿಂದ ಕೆಲಸವನ್ನು ಇಷ್ಟಪಡುತ್ತಿದ್ದಾರೆ. ಆದರೆ ಮನೆಯಲ್ಲಿ ಕುಳಿತ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಲು ಚಿಂತನೆ ನಡೆಯುತ್ತಿದೆ. ಕೊರೋನಾ ಬಳಿಕ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ಹೆಚ್ಚವರಿ ಟ್ಯಾಕ್ಸ್ ಹಾಕಲು ಲೆಕ್ಕಾಚಾರ ನಡೆಯುತ್ತಿದೆ.

ವರ್ಕ್ ಫ್ರಂ ಹೋಮ್ ; ದೊಡ್ಡ ಗುಟ್ಟು ಹೇಳಿದ ಬಿಲ್ ಗೇಟ್ಸ್

ಡೊಯಿಟ್ಶೆ ಬ್ಯಾಂಕ್‌ನ ಆರ್ಥಿಕ ತಜ್ಞ ಹೊಸ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಪ್ರತಿ ದಿನದ ಆದಾಯದ ಮೇಲೆ ಶೇಕಡಾ 5 ರಷ್ಟು ತೆರಿಗೆ ವಿಧಿಸುವ ಹೊಸ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮನೆಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಉದ್ಯೋಗಿಗಳು ಮನೆಯಿಂದ ಹೊರಬರುತ್ತಿಲ್ಲ. ಹೀಗಾಗಿ ಹಣದ ಚಲಾವಣೆ ಆಗುತ್ತಿಲ್ಲ. ಮಧ್ಯಾಹ್ನದ ಊಟ ಸೇರಿದಂತೆ ಯಾವ ಖರ್ಚು ನಡೆಯುತ್ತಿಲ್ಲ. ಹೀಗಾಗಿ ಸರ್ಕಾರದ ಆದಾಯಕ್ಕೂ ಕತ್ತರಿ ಬಿದ್ದಿದೆ ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

ಶೇಕಡಾ 5ರಷ್ಟು ತೆರಿಗೆ ವಿಧಿಸುವುದರಿಂದ ಅಮೆರಿಕದಲ್ಲಿ ವಾರ್ಷಿಕ 49 ಬಿಲಿಯನ್ ಆದಾಯ ಹರಿದು ಬರಲಿದೆ ಅನ್ನೋ ಲೆಕ್ಕಾಚಾರ ಹಾಕಲಾಗಿದೆ. ಕೊರೋನಾ ಬಲಿಕ ವರ್ಕ್ ಫ್ರಮ್ ಹೋಮ್ ಪರಿಕಲ್ಪನೆ ಸಾಮಾನ್ಯವಾಗಲಿದೆ. ಹೆಚ್ಚಿನ ಕಂಪನಿಗಳು ಮನೆಯಿಂದ ಕೆಲಸ ಮಾಡುವ ಅವಕಾಶ ಮಾಡಿಕೊಡಲಿದೆ. ಇದರಿಂದ ಹಣದ ಚಲಾವಣೆ ಆಗುವುದಿಲ್ಲ. ಕಚೇರಿಗೆ ತೆರಳುವ ಸೇರಿದಂತೆ ಇತರ ಖರ್ಚನ್ನು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ನೀಡಿದರೆ ಸರ್ಕಾರಕ್ಕೂ ನೆರವಾಗಲಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ. ಈ ಮಾಡೆಲ್  ಭಾರತದಲ್ಲೂ ಜಾರಿಯಾದರೆ ಅಚ್ಚರಿಯಿಲ್ಲ.