ಔಪಚಾರಿಕ ಪದವಿಗಳನ್ನು ಪಡೆಯದೇ ಅಥವಾ ಅರ್ಧದಲ್ಲೇ ಶಾಲಾ ಶಿಕ್ಷಣ ಮೊಟಕುಗೊಳಿಸಿ ಜೀವನದಲ್ಲಿ ಸಾಧನೆಗೈದವರಿದ್ದಾರೆ. ಅವರ ಸಾಧನೆಗೆ ಜಗತ್ತೇ ತಲೆಬಾಗಿದೆ. ಅವರ ಪೈಕಿ ಕೆಲವು ಉದಾಹರಣೆಗಳು ಇಲ್ಲಿವೆ.

  • ಐನ್’ಸ್ಟೀನ್ : ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಅಲ್ಪರ್ಟ್ ಐನ್’ಸ್ಟೀನ್ ಒಬ್ಬರು. ತನ್ನ ಜೀವಮಾನದಲ್ಲಿ 300ಕ್ಕಿಂತಲೂ ಹೆಚ್ಚು ವೈಜ್ಞಾನಿಕ ಸಿದ್ಧಾಂತಗಳನ್ನು ಮಂಡಿಸಿದ, e=mc2, ಹಾಗೂ ಸಾಪೇಕ್ಷತವಾದವನ್ನು ವಿವರಿಸಿ ನೋಬೆಲ್ ಪ್ರಶಸ್ತಿಯನ್ನು ಪಡೆದ ಐನ್’ಸ್ಟೀನ್ ಅರ್ಧದಲ್ಲೇ ಶಾಲಾ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದವರು. ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಅರ್ಹತಾ ಪರೀಕ್ಷೆಗಳನ್ನು ಬರೆದರಾದರೂ ಆರಂಭದಲ್ಲಿ ಅವರಿಗೆ ಅವುಗಳಲ್ಲಿ ಪಾಸಾಗಲಿಕ್ಕೆ ಸಾಧ್ಯವಾಗಿರಲಿಲ್ಲ.
  • ಲಿಂಕನ್ ಹೆಸರನ್ನು ಕೇಳದವರಾರಿದ್ದಾರೆ. ಅಮೆರಿಕಾ ಕಂಡ ಅತೀ ಜನಪ್ರಿಯ ಅಧ್ಯಕ್ಷರಲ್ಲಿ ಲಿಂಕನ್ ಒಬ್ಬರು. ಅಮೆರಿಕಾವನ್ನು ಸಂಕಷ್ಟದ ಸಮಯದಲ್ಲಿ ಸಮರ್ಥವಾಗಿ ಮುನ್ನಡೆಸಿದ ಲಿಂಕನ್, ದೇಶದಲ್ಲಿ ಗುಲಾಮಗಿರಿ ವ್ಯವಸ್ಥೆಗೆ ಅಂತ್ಯ ಹಾಡಿದ ಲಿಂಕನ್ ಭಾರೀ ದೊಡ್ಡ ಪದವಿಗಳನ್ನು ಪಡೆವರಾಗಿರಲಿಲ್ಲ.
  • ಶೇಕ್ಸ್’ಪಿಯರ್ : ಸಾಹಿತ್ಯಲೋಕದ ಸಾಮ್ರಾಟ ವಿಲಿಯಮ್ ಶೇಕ್ಸ್’ಪಿಯರ್ ತನ್ನ 13ನೇ ವಯಸ್ಸಿನಲ್ಲಿ ಶಾಲಾ ವಿದ್ಯಾಭ್ಯಾಸ ತೊರೆದವರು. ಅದಾಗ್ಯೂ 1700 ಪದಗಳನ್ನು ಅವರು ಅವಿಷ್ಕರಿಸಿದ್ದಾರೆ.
  • ಹೆನ್ರಿ ಫೋರ್ಡ್: ಜಗತ್ತಿನ ಅಟೋಮೊಬೈಲ್ ಕೈಗಾರಿಕೆಯಲ್ಲಿ ಹೆನ್ರಿ ಫೋರ್ಡ್ ಕೊಡುಗೆ ಅಪಾರ. ಸಣ್ಣ ರೈತನ ಮಗನಾಗಿ, ಅಟೋಮೊಬೈಲ್ ಕೈಗಾರಿಕಾ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಫೋರ್ಡ್ ಹೆಚ್ಚಿನ ಶಿಕ್ಷಣ ಪಡೆಯಲಿಲ್ಲ,
  • ಜಾಬ್ಸ್: ಆ್ಯಪಲ್ ಕಂಪನಿಯ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಕೇವಲ ಶಾಲಾ ಶಿಕ್ಷಣವನ್ನು ಪೂರೈಸಿ, ಕೇವಲ ಆರು ತಿಂಗಳು ಕಾಲೇಜು ಹೋಗಿದ್ದಾರೆ. ಜಗತ್ತನ್ನೇ ವಿಸ್ಮಿತಗೊಳಿಸುವ ಐ-ಪ್ಯಾಡ್, ಐ-ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದವರು ಇದೇ ಸ್ಟೀವ್ ಜಾಬ್ಸ್.
  • ಥಾಮಸ್ ಅಲ್ವಾ ಎಡಿಸನ್, ಪಿಕಾಸೋ, ಬಿಲ್ ಗೇಟ್ಸ್.....ಈ ರೀತಿ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.